ಮಂಗಳೂರು : ಬೈಕ್ ಲಾರಿ ಡಿಕ್ಕಿಯಲ್ಲಿ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಮಂಗಳೂರು ನಗರದ ಕುಂಟಿಕಾನ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಮೇಲೆ ಶುಕ್ರವಾರ ಸಂಜೆ ನಡೆದಿದೆ. ಕೊಟ್ಟಾರದಿಂದ ಕೆಪಿಟಿ ಜಂಕ್ಷನ್ ಕಡೆಗೆ ಎರಡೂ ವಾಹನಗಳು ಹೋಗುತ್ತಿದ್ದಾಗ ಬೈಕ್ ಸವಾರ ಓವರ್ ಟೇಕ್ ಮಾಡಲು ಯತ್ನಿಸಿದಾಗ ಲಾರಿಯ ಮುಂಭಾಗದ ಬಲಭಾಗವು ಬೈಕ್ಗೆ ಢಿಕ್ಕಿ ಹೊಡೆದು, ಬೈಕ್ ರಸ್ತೆಯ ಎಡಭಾಗಕ್ಕೆ ಚಲಿಸಿ ಹಿಂಬದಿ ಬಲ ಚಕ್ರದ ಅಡಿ ಬಿದ್ದಿದೆ.
ಸವಾರನ ಮೇಲೆ ಲಾರಿ ಮೇಲೆ ಹರಿದಿದೆ. ಮೃತ ಯುವಕನನ್ನು ಯೆನಪೋಯ ಕಾಲೇಜಿನ ವಿದ್ಯಾರ್ಥಿ, ಮೇಲ್ಕಾರ್ ಸಮೀಪದ ರೇಂಗೇಲ್ ನಿವಾಸಿ ಮೊಹಮ್ಮದ್ ಜಾಸೀಮ್ (18) ಎಂದು ಗುರುತಿಸಲಾಗಿದೆ. ಗಾಯಗೊಂಡವ ಸಾಹಿರ್ ಸುಲೈಮಾನ್ (20) ಎಂದು ಗುರುತ್ತಿಸಲಾಗಿದೆ. ಸ್ಥಳಕ್ಕೆ ಕದ್ರಿ ಸಂಚಾರಿ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.