ಕಳೆದೆರಡು ವರ್ಷಗಳ ಹಿಂದೆ ಶ್ರದ್ಧಾ ವಾಕರ್ (Shraddha Walker) ಎಂಬ ಯುವತಿಯ ಬರ್ಬರ ಹತ್ಯೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಪ್ರೇಯಸಿಯನ್ನೇ ಬರ್ಬರವಾಗಿ ಕೊಲೆ ಮಾಡಿ, ನಂತರ ತುಂಡು ತುಂಡಾಗಿ ಫ್ರಿಡ್ಜ್ನಲ್ಲಿಟ್ಟಿದ್ದ. ಈ ವೇಳೆ ಶ್ರದ್ಧಾ ಕೇಸ್ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.
ಇದೀಗ ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಬೆಂಗಳೂರಿನಲ್ಲೊಂದು (Bengaluru) ಮಹಿಳೆಯನ್ನ ಬರ್ಬರ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನು ಈ ಪ್ರಕರಣದ ಹಿಂದಿನ ಹಂತಕನಿಗಾಗಿ ಪೊಲೀಸರು ತೀವ್ರ ಶೋಧದಲ್ಲಿದ್ದಾರೆ.
ಇನ್ನು ಈ ಕೊಲೆಯಾದ ಮಹಿಳೆಯನ್ನ ಮಹಾಲಕ್ಷ್ಮಿ (29) ಎಂದು ಗುರುತಿಸಲಾಗಿದೆ. ಬೆಂಗಳೂರಿನ ವೈಯಾಲಿಕಾವಲ್ ನ ಮುನೇಶ್ವರ ಬ್ಲಾಕ್ ನಾಲ್ಕನೆ ಕ್ರಾಸ್ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಕಳೆದ 3 ತಿಂಗಳಿಂದ ವಾಸವಾಗಿದ್ದ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
30 ತುಂಡು ಮಾಡಿ ಫ್ರಿಡ್ಜ್ನಲ್ಲಿಟ್ಟ ಹಂತಕ!
ಕಳೆದ ಮೂರು ತಿಂಗಳ ಹಿಂದಷ್ಟೆ ಬಾಡಿಗೆ ಮನೆಗೆ ಬಂದಿದ್ದ ಮಹಾಲಕ್ಷ್ಮಿ ಮದುವೆಯನ್ನೂ ಆಗಿದ್ದರು. 4 ವರ್ಷದ ಒಂದು ಮಗುವೂ ಇತ್ತು. ಆದರೆ ಗಂಡನನ್ನು ಬಿಟ್ಟು ವೈಯಾಲಿಕಾವಲ್ ನಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಾಲಕ್ಷ್ಮಿ ಇಂದು ಕೊಲೆಯಾಗಿದ್ದಲ್ಲದೇ, ತುಂಡು ತುಂಡಾಗಿ ಫ್ರಿಡ್ಜ್ನಲ್ಲಿ ಪತ್ತೆಯಾಗಿದ್ದಾಳೆ.
30 ಕ್ಕು ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಮೃತದೇಹ ಫ್ರಿಜ್ ನಲ್ಲಿ ಮೃತ ಮಹಿಳೆಯನ್ನು ಇಟ್ಟಿದ್ದರು ಎನ್ನಲಾಗಿದೆ. ಈಕೆಯನ್ನು 10-15 ದಿನಗಳ ಹಿಂದೆ ಕೊಲೆ ಮಾಡಿರೋ ಶಂಕಿಸಲಾಗಿದೆ. ಜಯರಾಮ್ ಎಂಬ ವ್ಯಕ್ತಿಗೆ ಸೇರಿದ್ದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ ಮಹಾಲಕ್ಷ್ಮಿಯನ್ನ, ಯುವಕನೊಬ್ಬ ಪಿಕಪ್ ಮತ್ತು ಡ್ರಾಪ್ ಮಾಡುತ್ತಿದ್ದನಂತೆ. ಇದೀಗ ಆ ಯುವಕನೇ ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಗಂಡನನ್ನು ಬಿಟ್ಟು ಒಬ್ಬಂಟಿ ವಾಸ!
ಹೊರರಾಜ್ಯದವಳು ಎನ್ನಲಾದ ಕೊಲೆಯಾದ ಮಹಿಳೆ ಮಹಾಲಕ್ಷ್ಮಿ, ಸುಮಾರು ವರ್ಷಗಳಿಂದ ಇಲ್ಲೇ ವಾಸವಾಗಿದ್ದರಂತೆ. ಇನ್ನು 3 ತಿಂಗಳ ಹಿಂದಷ್ಟೇ ವೈಯಾಲಿಕಾವಲ್ ನ ಮುನೇಶ್ವರ ಬ್ಲಾಕ್ ನಾಲ್ಕನೆ ಕ್ರಾಸ್ ಮನೆಯಲ್ಲಿ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು, ಗಂಡನನ್ನ ಬಿಟ್ಟು ಒಬ್ಬಂಟಿಯಾಗಿ ವಾಸ ಮಾಡುತ್ತಿದರು ಎನ್ನಲಾಗಿದೆ.
ಇನ್ನು ಮಹಾಲಕ್ಷ್ಮಿ ಗಂಡ ನೆಲಮಂಗಲದಲ್ಲಿ ಇದ್ದಾನೆ ಎಂದು ಹೇಳಲಾಗಿದ್ದು, ನಾಲ್ಕು ವರ್ಷದ ಮಗು ಕೂಡ ಇದೆ ಎನ್ನಲಾಗಿದೆ. ನೆಲಮಂಗಲ ಬಸವಣ್ಣ ದೇವರ ಮಠದಲ್ಲಿ ಮಹಾಲಕ್ಷ್ಮಿ ಪತಿ ಕೆಲಸ ಮಾಡ್ತಾ ಇದ್ದ, ಹೊರರಾಜ್ಯದ ಫ್ಯಾಮಿಲಿಯಾದ್ರೂ ಹಲವು ವರ್ಷದಿಂದ ಬೆಂಗಳೂರಲ್ಲಿ ವಾಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಕಾಲ್ ಸ್ವೀಕರಿಸದ ಮಹಾಲಕ್ಷ್ಮಿ!
ಮಹಾಲಕ್ಷ್ಮಿಗೆ ಹಲವಾರು ದಿನಗಳಿಂದ ಪತಿ ಕರೆ ಮಾಡುತ್ತಲೇ ಇದ್ದರಂತೆ. ಆದ್ರೆ ಕರೆ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ. ಆದರೆ ಇಂದು ಪತಿ ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಫ್ರಿಡ್ಜ್ನಿಂದ ಹೊರಬಂದ ಹುಳಗಳು
ಹಲವು ದಿನಗಳಿಂದ ಕರೆ ಸ್ವೀಕರಿಸದ ಹಿನ್ನೆಲೆ ಕೊಲೆಯಾದ ಮಹಾಲಕ್ಷ್ಮಿ ಗಂಡ ಬಾಡಿಗೆ ಬಂದು ಬಾಗಿಲು ಓಪನ್ ಮಾಡಿದ್ದು, ಈ ವೇಳೆ ಫ್ರಿಡ್ಜ್ನಿಂದ ಹೊಳ ಬರುತ್ತಾ ಇತ್ತು ಎನ್ನಲಾಗಿದೆ.
15-20 ದಿನಗಳ ಹಿಂದೆ ಕೊಲೆ ನಡೆದಿರೋ ಶಂಕೆ
ಸುಮಾರು 10-15 ದಿನದ ಹಿಂದೆಯೇ ಈ ಕೊಲೆ ನಡೆದಿರೊ ಶಂಕಿಸಲಾಗಿದ್ದು, ಸೆ.2 ನೇ ತಾರೀಖಿನಂದು ಮಹಾಲಕ್ಷ್ಮಿ ಮೊಬೈಲ್ ಸ್ವಿಚ್ ಆಪ್ ಆಗಿತ್ತು ಎನ್ನಲಾಗಿದೆ. ಆದ್ದರಿಂದ ಬಹುತೇಕ ಅವತ್ತೇ ಮಹಿಳೆಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸದ್ಯ ಘಟನೆ ನಡೆದ ಸ್ಥಳದಲ್ಲಿ ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಸದ್ಯ ವೈದ್ಯಾಧಿಕಾರಿಗಳನ್ನು ಸಹ ಕರೆಸಿ ಪೊಲೀಸರು ಪರಿಶೀಲನೆ ಮಾಡ್ತಾ ಇದ್ದಾರೆ.
ಯುವಕನೊಬ್ಬನ ಮೇಲೆ ಅನುಮಾನ
ಮೃತ ಮಹಾಲಕ್ಷ್ಮಿ ಜೊತೆ ಒರ್ವ ನಿರಂತರ ಸಂಪರ್ಕ ಇದ್ದ ಎಂದು ಹೇಳಲಾಗಿದ್ದು, ಆತನ ಮೇಲೆಯೇ ಹೆಚ್ಚಿನ ಅನುಮಾನಿಸಲಾಗಿದೆ. ಇನ್ನು ಮೃತಳ ಸೋಷಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಅಕೌಂಟ್ಗಳಿದ್ದು, ಹಾಗೆಯೇ ಬೇರೆ ಬೇರೆಯವರೊಂದಿಗ ಫೋಟೋಗಳು ಪತ್ತೆಯಾಗಿವೆ ಎನ್ನಲಾಗಿದೆ.