Advertisement
ಡಿ.16 ರಂದು ಮಡಿಕೇರಿಯ ಸೈನಿಕ ಶಾಲೆಯಲ್ಲಿ, ಬ್ರಹ್ಮಗಿರಿ ಸಹೋದಯ ಕಾಂಪ್ಲೆಕ್ಸ್ ಕೊಡಗು ಇದರ ಸಹಯೋಗದಲ್ಲಿ ಫುಟ್ಬಾಲ್, ಹ್ಯಾಂಡ್ ಬಾಲ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಫುಟ್ಬಾಲ್ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 16 ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 10ನೇ ತರಗತಿಯ ಶಿವಶಂಕರ್, ಅಬಾನ್ ಅಬ್ದುಲ್ ಜಬ್ಬಾರ್, ಪ್ರಾಪ್ತ್. ಪಿ, ಗೌತಮ್.ಟಿ, ಪ್ರಣಾಮ್, ನಿಹಾಲ್ ಅಝೀಜ್, ಹಿತೈಷ್.ಎಂ, ಶ್ರೇಯಸ್ ಎಸ್.ಎ, ತನ್ವಿತ್. ಬಿ, ಯಶಸ್ ಡಿ.ಪಿ 9ನೇ ತರಗತಿಯ ಅಹಮದ್ ಅನ್ಸಿಫ್, ಮಹಮದ್ ಫಜಾನ್, ಮಹಮ್ಮದ್ ಸನಫ್, ಇಶನ್ ಅಹಮದ್. ಜಿ, ಮಹಮ್ಮದ್ ಶಾಝ್ ಎಂಟನೇ ತರಗತಿಯ ವರ್ಷಿತ್ ಎಂ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ತೀರ್ಥವರ್ಣ ಬಳ್ಳಡ್ಕ ಮತ್ತು ಶ್ರೀಮತಿ ಸುಪ್ರಿಯ ಮಾರ್ಗದರ್ಶನ ನೀಡಿದ್ದಾರೆ.

Advertisement