ಕಾರ್ಕಳ- ಧರ್ಮಸ್ಥಳ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಮಿನಿ ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ನಡೆದ ಘಟನೆ ಸೋಮವಾರ (ಸೆ.30) ನಡೆದಿದೆ. ಬೈಕಿನಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳಿದ್ದು, ಪತಿ ಮತ್ತು ಮೂವರು ಮಕ್ಕಳು ಸಾವನಪ್ಪಿದ್ದಾರೆ ಎಂದು ವರದಿ ಹೇಳಿದೆ.
ಮೃತರನ್ನು ಸುರೇಶ್ ಆಚಾರ್ಯ (36 ವ), ಮಕ್ಕಳಾದ ಸುಮೀಕ್ಷಾ (7 ವ) ಸುಶ್ಮಿತಾ (5 ವ), ಸುಶಾಂತ್ (2 ವ) ಎಂದು ಗುರುತಿಸಲಾಗಿದೆ. ಸುರೇಶ್ ಆಚಾರ್ಯ ಅವರ ಪತ್ನಿ ಮೀನಾಕ್ಷಿ (32 ವ) ಗಂಭೀರ ಗಾಯಗೊಂಡಿದ್ದು, ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ನಲ್ಲೂರು ಗ್ರಾಮದ ಕೊಡಪಟ್ಯಾ ಮನೆಯವರು. ಇವರು ವೇಣೂರಿನಿಂದ ನಲ್ಲೂರಿಗೆ ಬರುತ್ತಿದ್ದರು. ಈ ವೇಳೆ ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.