ಕನ್ನಡ ನಟಿ, ರಿಯಾಲಿಟಿ ಶೋ ತೀರ್ಪುಗಾರ್ತಿ ರಕ್ಷಿತಾ ಪ್ರೇಮ್ ದಂಪತಿ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭ ನವರಾತ್ರಿ ಪ್ರಯುಕ್ತ ಕರಾವಳಿ, ತುಳುನಾಡಿನಲ್ಲಿ ಆಚರಣೆಯಲ್ಲಿರುವ ಹುಲಿ ವೇಷ ಕುಣಿತವನ್ನು ಅವರು ವೀಕ್ಷಣೆ ಮಾಡಿದರು. ಪೇಟೆಯಲ್ಲಿ ಹುಲಿ ವೇಷ ಕುಣಿತ ನಡೆಯುತ್ತಿರುವುದನ್ನು ಕಂಡು ಕಾರಿನಿಂದ ಇಳಿದು ಬಂದು ಹುಲಿ ಕುಣಿತವನ್ನು ಕೆಲ ಹೊತ್ತು ವೀಕ್ಷಿಸಿ, ತಂಡವನ್ನು ಪ್ರೋತ್ಸಾಹಿಸಿ ಸಂಭ್ರಮಿಸಿದರು. ಛಾಯಗ್ರಾಹಕ ಸಂತೋಷ್ ಸುಬ್ರಹ್ಮಣ್ಯ ಹಾಗೂ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ಬಳಿಕ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ನಟಿ ರಕ್ಷಿತಾ ಪ್ರೇಮ್ ಸಂಜೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅರ್ಚಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.