ಕೆನಡಾದಲ್ಲಿ ಉದ್ಯೋಗ ಸಿಗದೆ ಜನರು ಪರದಾಡುತ್ತಿದ್ದಾರೆ. ಅದರಲ್ಲೂ ಭಾರತೀಯರು ಉದ್ಯೋಗಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಈ ರೀತಿ ಕಿಲೋಮೀಟರ್ ಗಟ್ಟಲೇ ಸಾಲು ನಿಂತಿರೋದು ಯಾವ ಕೆಲಸಕ್ಕೆ ಗೊತ್ತಾ ?!
ಈ ವಿಡಿಯೋದಲ್ಲಿ ಕೆನಡಾದ ರೆಸ್ಟೋರೆಂಟ್ ಒಂದರ ಮುಂದೆ ಹೋಟೆಲ್ನ ವೇಟರ್ ಮತ್ತು ಸಪ್ಲೇಯರ್ ಕೆಲಸಕ್ಕೆ ಭಾರತೀಯ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿರುವ ಈ ದೃಶ್ಯ ಗಮನ ಸೆಳೆದಿದೆ.
ಭಾರತದ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ಮೂಲಕ ಸಿಖ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾರತದಿಂದ ಕೆನಡಾಗೆ ವಲಸೆ ಹೋಗಿದ್ದು ಅವರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ.