ಸುಳ್ಯದ ನೆಹರು ಮೆಮೋರಿಯಲ್‌ ಕಾಲೇಜಿನಲ್ಲಿ 38 ವರ್ಷಗಳ ಕಾಲ ಬೋಧಕೇತರ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದಿ. ಚೋಮ ಬಿ ಅವರು ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಭೆ ಕಾಲೇಜಿನ ದೃಶ್ಯ-ಶ್ರವಣ ಕೊಠಡಿಯಲ್ಲಿ ನಡೆಯಿತು. ಅವರ ವೃತ್ತಿ ಬದುಕಿನಲ್ಲಿ ಸಹೋದ್ಯೋಗಿಗಳೊಂದಿಗಿದ್ದ ಒಡನಾಟ, ಕೆಲಸದಲ್ಲಿದ್ದ ಶ್ರದ್ಧೆಯ ಕುರಿತು ಕಾಲೇಜಿನ ಪ್ರಾಚಾರ್ಯರಾದ ಡಾ. ರುದ್ರಕುಮಾರ್‌ ಎಂ ಎಂ ಅವರು ನಡಿನಮನ ಸಲ್ಲಿಸಿ, ಮೃತರ ಗೌರವಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪದವಿ ಹಾಗೂ ಪದವಿ-ಪೂರ್ವ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *