ವಿವಿಧ ಕಂಪೆನಿಗಳಿಗೆ ಆಯ್ಕೆ
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ “ಉದ್ಯೋಗ ಮೇಳ 2024” ಆಯೋಜಿಸಲಾಗಿದ್ದು, ಉದ್ಘಾಟನಾ ಸಮಾರಂಭವು ಅಕ್ಟೋಬರ್ 22 ಮಂಗಳವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಂಗಳೂರು ಎನ್.ಐ.ಐ.ಟಿ.ಯ ಐ.ಎಫ್.ಬಿ.ಐ ನ ವೃತ್ತಿ ಸಲಹೆಗಾರರಾದ ಶ್ರೀನಿಧಿ ಹಾಗೂ ರಮ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ವಹಿಸಿದ್ದು ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶ ನಿರ್ದೇಶಕಿ ಡಾ. ಮಮತಾ ಕೆ., ಬಿ.ಸಿ.ಎ ವಿಭಾಗ ಮುಖ್ಯಸ್ಥೆ ಹಾಗೂ ಪ್ಲೇಸ್ ಮೆಂಟ್ ಆಫಿಸರ್ ಭವ್ಯ ಮನು ಪೆರುಮುಂಡ ಉಪಸ್ಥಿತರಿದ್ದರು.
ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿಯರಾದ ವಿಜೇತ ಬಿ ಎಸ್ ಹಾಗೂ ದೀಪಿಕಾ ಎ ಪ್ರಾರ್ಥಿಸಿ, ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಉಜಾನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭೋದಕ ಭೋದಕೇತರ ಸಿಬ್ಬಂದಿ ಹಾಗೂ ಉದ್ಯೋಗಾಸಕ್ತ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಂದರ್ಶನ ನಡೆಸಲಾಯಿತು. ಈ ಉದ್ಯೋಗ ಮೇಳದಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ, ಎಂ.ಎಸ್ಸಿ, ಎಂ.ಕಾಂ, ಎಂ.ಬಿ.ಎ, ಇಂಜಿನಿಯರಿಂಗ್, ಎಂ.ಎಸ್.ಡಬ್ಲ್ಯೂ ಹೀಗೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅವಕಾಶ ಒದಗಿಸಿದ್ದು 200ಕ್ಕೂ ಅಧಿಕ ಆಕಾಂಕ್ಷಿಗಳು ನೋಂದಾಯಿಸಿದರೆ 79 ಅಭ್ಯರ್ಥಿಗಳು ಹಲವು ಕಂಪೆನಿಗಳಿಗೆ ವಿವಿಧ ಸ್ತರಗಳಲ್ಲಿ ಆಯ್ಕೆಗೊಂಡರು.
ಈ ಉದ್ಯೋಗ ಮೇಳದ ಯಶಸ್ಸಿಗೆ ಉಪನ್ಯಾಸಕರಾದ ದಿವ್ಯಾ ಟಿ ಎಸ್, ಕುಲದೀಪ್ ಪಿ ಪಿ, ವಿಷ್ಣು ಪ್ರಶಾಂತ್ ಬಿ, ಹರಿಪ್ರಸಾದ್ ಎ ವಿ, ಅಶ್ವಿನಿ ಕೆ ಸಿ, ದೀಕ್ಷ ಎಂ ಡಿ, ರಕ್ಷಾ, ನವ್ಯ ಹಾಗೂ ಭೋದಕೇತರ ಸಿಬ್ಬಂದಿಗಳಾದ ಶಿವಾನಂದ ಮತ್ತು ಪವನ್ ಸಹಕರಿಸಿದರು.