Advertisement
ಕರ್ತವ್ಯದಲ್ಲಿರುವಾಗಲೇ ಕಡಬ ಮೂಲದ ಯೋಧ ಹೃದಯಾಘಾತದಿಂದ ಹುತಾತ್ಮರಾಗಿರುವ ಘಟನೆ ಕೊಯಂಬತ್ತೂರಿನಲ್ಲಿ ನಡೆದಿದೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತರಪ್ಪೇಳ್ ನಿವಾಸಿ ಜೋನಿ ಎಂಬವರ ಮಗ ಲಿಜೇಶ್ ಕುರಿಯನ್ ಹುತಾತ್ಮ ಯೋಧ. ಮಾ.26 ರಂದು ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಂಧರ್ಭ ಹೃದಯಾಘಾತ ಕ್ಕೆ ಒಳಗಾಗಿ ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ. ಇವರ ಪಾರ್ಥೀವ ಶರೀರ ಹುಟ್ಟೂರು ಕಡಬ ತಲುಪಲಿದೆ ಎಂದು ತಿಳಿದು ಬಂದಿದೆ.

Advertisement