2026ರ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಹೊಂದಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಧ್ಯಕ್ಷ ನಟ ವಿಜಯ್ (thalapathy Vijay) ಚೆನ್ನೈನ ವಿಕ್ರವಂಡಿಯಲ್ಲಿ ತಮ್ಮ ಮೊದಲ ರಾಜಕೀಯ ಸಮಾವೇಶವನ್ನು (political rally in Tamil Nadu)ನಡೆಸುತ್ತಿದ್ದಾರೆ.

ಈಗಾಗಲೇ ನಟನಿಗೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ. ಈ ಸಮ್ಮೇಳನಕ್ಕೆ ಕಾಲಿವುಡ್‌ ಸಿನಿಮಾ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.

ಈ ಹಿಂದೆ ನಟ ಪಕ್ಷವನ್ನು ಅನೌನ್ಸ್‌ ಮಾಡಿರುವಾಗ ರಾಜಕೀಯವು ನನಗೆ ಮತ್ತೊಂದು ವೃತ್ತಿಯಲ್ಲ. ಇದು ಪವಿತ್ರವಾದ ಜನರ ಕೆಲಸ. ನಾನು ಬಹಳ ಸಮಯದಿಂದ ಅದಕ್ಕಾಗಿ ನನ್ನನ್ನು ಸಿದ್ಧಪಡಿಸುತ್ತಿದ್ದೇನೆ. ರಾಜಕೀಯ ನನಗೆ ಹವ್ಯಾಸವಲ್ಲ. ಅದು ನನ್ನ ಆಳವಾದ ಆಸೆಯಾಗಿದೆ. ನಾನು ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ ಎಂದಿದ್ದರು.

ಸಂಜೆಯೇ ಆರಂಭವಾಗಬೇಕಿದ್ದರೂ ಬೆಳಗ್ಗೆಯಿಂದಲೇ ವಿಜಯ್ ಅಭಿಮಾನಿಗಳು ಸಮಾವೇಶಕ್ಕೆ ಬರಲಾರಂಭಿಸಿದ್ದಾರೆ ಎಂದು ವರದಿಯಾಗಿತ್ತು. ವಿಜಯ್‌ ಅವರ ರಾಜಕೀಯ ನಿಲುವು ತಿಳಿಯಲು ಅಭಿಮಾನಿಗಳು ಮತ್ತು ಸಾರ್ವಜನಿಕರು ಉತ್ಸುಕರಾಗಿದ್ದಾರೆ. ಏತನ್ಮಧ್ಯೆ, ವಿಜಯ್ ಅವರು ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ಚಿತ್ರರಂಗದ ಸದಸ್ಯರು ತಮ್ಮ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇಂದು ತಮ್ಮ ಹೊಸ ಪಯಣವನ್ನು ಆರಂಭಿಸುತ್ತಿರುವ ವಿಜಯ್ ಸರ್ ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಎಂದು ಟ್ವೀಟ್‌ ಮಾಡ್ತಿದ್ದಾರೆ ಸೆಲೆಬ್ರಿಟಿಗಳು.

‘ಪ್ರಪ್ಪೊಕ್ಕುಂ ಯೆಲ್ಲಂ ಉಯಿರ್ಕ್ಕುಂ’ (ಎಲ್ಲರೂ ಸಮಾನರು) ಎಂಬ ಪಕ್ಷದ ಘೋಷಣೆಯೊಂದಿಗೆ ವಿಜಯ್ ಅವರ ಪಕ್ಷವು ಈಗಾಗಲೇ ತನ್ನ ಸಾಮಾಜಿಕ ನ್ಯಾಯದ ನಿಲುವನ್ನು ಬಹಿರಂಗಪಡಿಸಿದೆ.

ಸಮ್ಮೇಳನದ ಸ್ಥಳದಲ್ಲಿ ಬಿಆರ್ ಅಂಬೇಡ್ಕರ್ ಮತ್ತು ಇವಿ ರಾಮಸಾಮಿ ಪೆರಿಯಾರ್ ನಡುವೆ ಕಾಲಿವುಡ್ ತಾರೆಯರ ದೊಡ್ಡ ಕಟೌಟ್‌ಗಳನ್ನು ಹಾಕಲಾಗಿದೆ.” ಪ್ರಪ್ಪೊಕ್ಕುಂ ಯೆಲ್ಲಂ ಉಯಿರ್ಕ್ಕುಂ’ (ಎಲ್ಲರೂ ಸಮಾನರು)ಎಂಬ ಪಕ್ಷದ ಘೋಷಣೆಯೊಂದಿಗೆ ವಿಜಯ್ ಅವರ ಪಕ್ಷವು ಈಗಾಗಲೇ ತನ್ನ ಸಾಮಾಜಿಕ ನ್ಯಾಯದ ನಿಲುವನ್ನು ಬಹಿರಂಗಪಡಿಸಿದೆ.
ಸಮ್ಮೇಳನದ ಸ್ಥಳದಲ್ಲಿ ಬಿಆರ್ ಅಂಬೇಡ್ಕರ್ ಮತ್ತು ಇವಿ ರಾಮಸಾಮಿ ಪೆರಿಯಾರ್ ಕಟೌಟ್‌ಗಳನ್ನು ಹಾಕಲಾಗಿದೆ.

ಅಸಂಖ್ಯಾತ ಜನರು ಈಗಾಗಲೇ ಸ್ಥಳಕ್ಕೆ ಜಮಾಯಿಸಿದ್ದಾರೆ. ಕೊನೆಯದಾಗಿ ವೆಂಕಟ್ ಅವರ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (ದಿ ಗೋಟ್) ನಲ್ಲಿ ಕಾಣಿಸಿಕೊಂಡಿದ್ದರು. ಅವರು ಎಚ್ ವಿನೋತ್ ಅವರೊಂದಿಗೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ, ಅವರ ಕೊನೆಯ ಚಿತ್ರ ಎಂದು ಹೇಳಲಾಗಿದೆ.

ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ನರೇನ್, ಪ್ರಿಯಾಮಣಿ, ಮಮಿತಾ ಬೈಜು ಮತ್ತು ಮೋನಿಶಾ ಬ್ಲೆಸ್ಸಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

Leave a Reply

Your email address will not be published. Required fields are marked *