ಸಮಾಜಸೇವಕರಾಗಿರುವ ಸುಳ್ಯದ ಕೆ.ಗೋಕುಲ್ ದಾಸ ರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ಅ.31ರಂದು ಸಂಜೆ ಜಿಲ್ಲಾಡಳಿತ ಪ್ರಕಟಿಸಿದ ಪಟ್ಟಿಯಲ್ಲಿ ಸುಳ್ಯ ತಾಲೂಕಿನ ಒಂದೇ ಒಂದು ಹೆಸರು ಇರಲಿಲ್ಲ. ಈ ಕುರಿತು ಮಾಧ್ಯಮ ವರದಿಯ ಬೆನ್ನಲ್ಲೆ ಜಿಲ್ಲಾಡಳಿತ ಎಚ್ಚತ್ತುಕೊಂಡು ಗೋಕುಲ್‌ ದಾಸರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ.

“ನನಗೆ ಈಗ ತಾನೇ ಪ್ರಶಸ್ತಿ ಘೋಷಣೆಯಾಗಿರುವ ಸಂದೇಶ ಬಂದಿದೆ” ಎಂದು ಗೋಕುಲ್ ದಾಸ್ ರವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

ಸುಳ್ಯದ ಶಾರದಾಂಬ ಉತ್ಸವ (ಎಸ್.ಸಿಕ್ಸ್) ನಲ್ಲಿ ಕಳೆದ 50 ವರ್ಷಗಳಿಂದ ಸಕ್ರಿಯರಾಗಿರುವ ಗೋಕುಲ್ ದಾಸ್ ರವರು ಸುಳ್ಯ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ

Leave a Reply

Your email address will not be published. Required fields are marked *