ಸುಳ್ಯ: ಮೇ 6 ರಂದು ನಗರದ ಪ್ರಮುಖ ಕಡೆಗಳಾದ ಉಬರಡ್ಕ, ಗಾಂಧಿನಗರ, ಸುಳ್ಯ ಬಸ್ ನಿಲ್ದಾಣ ಬಳಿ ‘ಕಾರ್ನರ್ ಮೀಟ್’ ನಡೆಯಿತು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸೇಡಿನ ರಾಜಕೀಯ, ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುವ ಆಡಳಿತ ವ್ಯವಸ್ಥೆ, ಮೂಲಭೂತ ಸೌಲಭ್ಯಗಳಿಂದ ನಿರಂತರವಾಗಿ ವಂಚಿತರಾಗಿ ಬೇಸತ್ತಿರುವ ಸುಳ್ಯ ಕ್ಷೇತ್ರಕ್ಕೆ ಈ ಬಾರಿ ಹೊಸ ರಾಜಕೀಯ ಪರ್ಯಾಯವನ್ನು ಬೆಂಬಲಿಸಲಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನರವರು ಸುಶಿಕ್ಷಿತ, ಸಮರ್ಥ ಅಭ್ಯರ್ಥಿ. ಅವರಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ, ಅದನ್ನು ಪರಿಹರಿಸುವ ಚಿಂತನೆ ಮತ್ತು ಯೋಜನೆಯಿದೆ, ಅದನ್ನು ಸರ್ಕಾರಿ ಆಡಳಿತದ ಮಟ್ಟದಲ್ಲಿ ಸಮರ್ಥವಾಗಿ ಮಂಡಿಸಿ ಅನುಷ್ಠಾನಗೊಳಿಸುವ ಸಾಮರ್ಥ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶ್ರೀಮತಿ ಸುಮನ ಬೆಳ್ಳಾರ್ಕರ್ ರವರ ವಿಜಯ ಶತಸಿದ್ಧ, ಆ ಮೂಲಕ ಕ್ಷೇತ್ರದ ಅಭಿವೃದ್ಧಿ ಪರ್ವಕ್ಕೆ ನಾಂದಿಯಾಗಲಿದೆ. ಮೂಲಭೂತ ನೌಕಾರ್ಯಗಳು ಅಭಿವುದ್ಧಿ ಕಾಣದೆ ಜನ ಸಾಮಾನ್ಯರು ಕಷ್ಟ ಅನುಭವಿಸುತ್ತಾ ಇದ್ದಾರೆ. ಶಿಕ್ಷಣ, ಆರೋಗ್ಯದ ಕಡೆ ಗಮನವೇ ಇಲ್ಲದೆ ಹಲವಾರು ಸರ್ಕಾರಿ ಶಾಲೆ ಕಾಲೇಜು ಕಟ್ಟಡಗಳು ಶಿಥಿಲ ಹೊಂದಿದೆ, ಅಧ್ಯಾಪಕರು ಉಪನ್ಯಾಸಕರ ಕೊರತೆ ಇದೆ. ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಮತ್ತು ಸರಿಯಾದ ಟೆಸ್ಟ್, ಚಿಕಿತ್ಸೆ ಕೊರತೆಯಿಂದಾಗಿ ಜನಸಾಮಾನ್ಯರು ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯು ಸ್ಥಿತಿ ಇದೆ. ಹಲವು ದಶಕಗಳಿಂದ ಮನೆಯ ಭೂ ಆಧಾರ ಇಲ್ಲದೆ ಜನ ಕಂಗೆಟ್ಟಿದ್ದಾರೆ. ಒಟ್ಟಿನಲ್ಲಿ ಸಮಸ್ಯೆಯ ಆಗರವಾಗಿರುವ ಕ್ಷೇತ್ರಕ್ಕೆ ಸಮರ್ಥ ಜನಪ್ರಯಿನಿಧಿಯ ಅಗತ್ಯವಿದೆ.
ನಕಲಿ ಮಾಡುವುದಿದ್ದರೆ ಸಂಪೂರ್ಣವಾಗಿ ನಕಲಿ ಮಾಡಿ ಪೂರ್ತಿಗೊಳಿಸಿ.
ಹಲವು ವರ್ಷಗಳ ಹಿಂದೆಯೇ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ನೀಡಿದ ಹಲವು ಮಾದರಿಯ ಪ್ರನಾಳಿಕೆಗಳನ್ನು, ಇವಾಗ ಹಲವು ರಾಷ್ಟ್ರೀಯಪಕ್ಷಗಳು ನಕಲು ಮಾಡುತ್ತಿವೆ, ಅದೇ ರೀತಿ ದೆಹಲಿಯಲ್ಲಿ ಆರೋಗ್ಯವನ್ನು ಗಮನವಿಟ್ಟು ತಂದ ಮೊಹಲಾ ಕ್ಲಿನಿಕ್ ಅನ್ನು ಇಲ್ಲೂ ಕೂಡಾ ನಕಲಿ ಮಾಡಿ ‘ನಮ್ಮ ಕ್ಲಿನಿಕ್’ ಎಂದು ಜಾರಿಗೆ ತಂದು ವೈದ್ಯರಿಲ್ಲದೇ, ಬೇಕಾದ ಪರಿಕರಗಳು ನೀಡದೆ. ಸಮಗ್ರವಾಗಿ ಕೊಂಡೊಯ್ಯಲು ವಿಫಲರಾದರು.
ಅದೇ ರೀತಿ ಆಮ್ ಆದ್ಮಿ ಪಾರ್ಟಿ ಮಹಿಳಾ ಅಭ್ಯರ್ಥಿಯನ್ನು ಘೋಷಿಸಿದ ಬೆನ್ನಲ್ಲೇ, ಇನ್ನೊಂದು ರಾಷ್ಟ್ರೀಯ ಪಕ್ಷ ತನ್ನ ಮೂವತ್ತು ವರ್ಷಗಳ ವಿಜಯದ ಅನುಭವವಿರುವ ಅಭ್ಯರ್ಥಿಯನ್ನು ಬದಲಾವಣೆ ಮಾಡಿದರು. ಇದೆಲ್ಲವು ನಕಲಿ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಶ್ರೀ ಅಶೋಕ್ ಅಡಮಲೆ ಹೇಳಿದರು. ಈ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕ ಗುರುಮೂರ್ತಿ, ಜಿಲ್ಲಾ ಸಂಯೋಜಕರಾದ ರವಿಪ್ರಸಾದ್, ಜಿಲ್ಲಾ ಮುಖಂಡ ವೇಣುಗೋಪಾಲ ಪೂಚ್ಚಪ್ಪಾಡಿ, ಖಲಂದರ್ ಎಲಿಮಲೆ, ರಶೀದ್ ಜಟ್ಟಿಪಳ್ಳ, ಉಪಸ್ಥಿತರಿದ್ದರು.
