Namma Sullia: ಸುಳ್ಯ ಇಲ್ಲಿನ ಅಸ್ತ್ರ ಸ್ಪೋರ್ಟ್ಸ್ ಆಶ್ರಯದಲ್ಲಿ ಸಾಕರ್ ಲೀಗ್ ಫುಟ್ಬಾಲ್ ಪಂದ್ಯ ಕೂಟವು ದಿನಾಂಕ ನವೆಂಬರ್3 ರಂದು ಶಾಂತಿನಗರ ಕ್ರೀಡಾಂಗಣದಲ್ಲಿ ನಡೆಯಿತು.
ಒಟ್ಟು 5 ತಂಡಗಳ ಈ ಪಂದ್ಯಾಕೂಟದಲ್ಲಿ ರಫೀಕ್ ಮಾಲೀಕತ್ವದ ಬಿಎಂಎ ಶೂಟರ್ಸ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಹಾಗೂ ಬದ್ರು ಪೈಚಾರ್ ಇವರ ಮಾಲೀಕತ್ವದ ಕಾವೇರಿ ಶೂಟರ್ಸ್ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇನ್ನೂ ವೈಯಕ್ತಿಕ
ಬೆಸ್ಟ್ ಗೋಲ್ ಕೀಪರ್ ಆಗಿ ಮಾಝ್,
ಬೆಸ್ಟ್ ಡಿಫೆಂಡರ್ ಆಗಿ ಅದ್ನಾನ್ ಪಟೇಲ್,
ಬೆಸ್ಟ್ ಸ್ಟ್ರೈಕರ್ ಆಗಿ ಹಾಷಿಮ್
ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಶಾನಿಫ್ ಪೈಚಾರ್ ತನ್ನದಾಗಿಸಿಕೊಂಡರು.
ಈ ಮದ್ಯೆ ಸ.ಉ.ಹಿ.ಪ್ರಾಥಮಿಕ ಶಾಲೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ನಝೀರ್ ಶಾಂತಿನಗರ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಸ್ತ್ರ ಸ್ಪೋರ್ಟ್ಸ್ ಅಧ್ಯಕ್ಷ ರಿಫಾಯಿ, ಶಾಂತಿನಗರ ಶಾಲಾ sdmc ಅಧ್ಯಕ್ಷ ನಝೀರ್ ಶಾಂತಿನಗರ, ಕಾರುಣ್ಯ ಚಾರಿಟೇಬಲ್ ಅಧ್ಯಕ್ಷ ಬಶೀರ್ ಆರ್.ಬಿ, ನಾಸಿರ್ ಕೆ.ಪಿ, ಲತೀಫ್ ಟಿ.ಎ, ಬದ್ರುದ್ದೀನ್ (ಕಾವೇರಿ), ರಫೀಕ್ (ಬಿಎಂಎ), ಸತ್ತಾರ್ (ಬೇಬಿಶಾಪ್), ಹನೀಫ್ (ಆಲ್ಫಾ), ಹಾರಿಸ್ ಶಾಂತಿನಗರ ಉಪಸ್ಥಿತರಿದ್ದರು.