ಸುಳ್ಯ: ಸುಳ್ಯದ ಫುಟ್ಬಾಲ್ ಪ್ರೇಮಿಗಳು ಬಹು ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಫುಟ್ಬಾಲ್ ಪೆವಿಲಿಯನ್ ಸುಳ್ಯ ಅರ್ಪಿಸುವ ಚಾಂಪಿಯನ್ ಲೀಗ್ ಫುಟ್ಬಾಲ್ ಪಂದ್ಯಾಕೂಟವು ಇದೇ ಬರುವ ನ.10 ರಂದು ಗಾಂಧಿನಗರ ಶಾಲಾ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ನಡೆಯಲಿದೆ.
ಒಟ್ಟು ಐದು ತಂಡಗಳ ಲೀಗ್ ಮಾದರಿಯ ಈ ಪಂದ್ಯಾಕೂಟದಲ್ಲಿ ಆಡಲಿದ್ದು, ಪ್ರತಿ ತಂಡದಲ್ಲಿ ಸುಳ್ಯ ತಾಲೂಕು ಅಲ್ಲದೇ, ಇತರ ಜಿಲ್ಲೆ ಅಥವಾ ರಾಜ್ಯದ ಮಟ್ಟದ ಎರಡು ಐಕಾನ್ ಆಟಗಾರರ ಸಮಾಗಮವಾಗಲಿದ್ದಾರೆ. ಹಾಗೂ ರಾಜ್ಯ ಕಂಡ ಶ್ರೇಷ್ಠ ಮಟ್ಟದ ತೀರ್ಪುಗಾರರು, ಜಿಲ್ಲೆ ಕಂಡ ಅತ್ಯುತ್ತಮ ವೀಕ್ಷಕ ವಿವರಣೆಗಾರರು, ಹಾಗೂ ಲೈವ್ ಟೆಲಿಕಾಸ್ಟ್ ಕೂಡ ನಡೆಯಲಿದೆ ಎಂದು ಸಂಘಟಕ ಮುನಾಫರ್ ತಿಳಿಸಿದ್ದಾರೆ.
ಅದೇ ರೀತಿ ಇಂದು (ನ.8)ದು ಪಂದ್ಯಾಕೂಟದ ಟ್ರೋಫಿ ಅನಾವರಣವು ಬಹಳ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ತಂಡದ ಮಾಲೀಕರು, ಸುಳ್ಯ ಫುಟ್ಬಾಲ್ ತಂಡದ ಹಿರಿಯ ಹಾಗೂ ಪ್ರಸ್ತುತ ಆಟಗಾರರು ಉಪಸ್ಥಿತರಿದ್ದರು.