namma sullia: ರಸ್ತೆಗಳಲ್ಲಿ ಅಡ್ಡಾ ದಿಡ್ಡಿ ಸುತ್ತಾಡುತ್ತಿದ್ದ ಬಿಡಾಡಿ ಆಡುಗಳನ್ನು ಸುಳ್ಯ ನಗರ ಪಂಚಾಯತ್ ವಶಕ್ಕೆ ಪಡೆದು ಪಂಚಾಯತ್ ಆವರಣದಲ್ಲಿ ಕಟ್ಟಿ ಹಾಕಿಸಿದೆ.

ಎಚ್ಚರಿಕೆ‌ ನೀಡಿದ ನ.ಪಂಚಾಯತ್

ಆಡುಗಳು ನಗರದಲ್ಲಿ ಎಲ್ಲೆಂದರಲ್ಲಿ ಸುತ್ತಾಡಿ ಸಮಸ್ಯೆ ಸೃಷ್ಠಿಸುತ್ತವೆ, ವಾಹನಗಳಿಗೆ ಅಡ್ಡ ಬರುತ್ತಿದೆ ಎಂದು ಸಾರ್ವಜನಿಕರಿಂದ ಆಗಾಗ ದೂರುಗಳು ಕೇಳಿಬರುತ್ತಿತ್ತು, ಈ ಮೊದಲೇ ನಗರ ಪಂಚಾಯತ್ ಇದರ ವಿರುದ್ಧ ಆಡಿನ ಮಾಲಿಕರಿಗೆ ತಿಳಿಯುವಂತೆ ಎಚ್ಚರಿಕೆ ಕೂಡಾ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಡುಗಳ ಹಿಂಡನ್ನು ನಗರ ಪಂಚಾಯತ್ ಸಿಬ್ಬಂದಿ ಇದೀಗ ವಶಕ್ಕೆ ಪಡೆದು ನಗರ ಪಂಚಾಯತ್ ಆವರಣದಲ್ಲಿ ಕಟ್ಟಿ ಹಾಕಿದ್ದಾರೆ.ವಾರಿಸುದಾರರು ದಂಡ ಕಟ್ಟಿ ಬಿಡಿಸಿಕೊಳ್ಳಬಹುದು ಎಂದು ನಗರ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ. ಆಡುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದು ಎಂದು ನಗರ ಪಂಚಾಯತ್ ಈ ಹಿಂದೆಯೇ ಪ್ರಕಟಣೆ ನೀಡಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *