ಸುಳ್ಯ: ಫುಟ್ಬಾಲ್ ಪೆವಿಲಿಯನ್ ಸುಳ್ಯ ಅರ್ಪಿಸುವ ಚಾಂಪಿಯನ್ ಲೀಗ್ ಫುಟ್ಬಾಲ್ ಪಂದ್ಯಾಕೂಟವು ನ.10 ರಂದು ಗಾಂಧಿನಗರ ಶಾಲಾ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ಒಟ್ಟು ಐದು ತಂಡಗಳ ಲೀಗ್ ಮಾದರಿಯ ಈ ಪಂದ್ಯಾಕೂಟದಲ್ಲಿ, ಪ್ರತಿ ತಂಡದಲ್ಲಿ ಸುಳ್ಯ ತಾಲೂಕು ಅಲ್ಲದೇ, ಇತರ ಜಿಲ್ಲೆ ಹಾಗೂ ರಾಜ್ಯದ ಮಟ್ಟದ ಐಕಾನ್ ಆಟಗಾರರು ತಮ್ಮ ಪ್ರದರ್ಶನ ತೋರ್ಪಡಿಸಿದರು. ಆರಂಭಿಕ ಹಂತದಲ್ಲೇ ಪ್ರತಿ ಪಂದ್ಯ ಕೂಡಾ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಇರುವಂತೆ ಮಾಡಿತು.
ಫುಟ್ಬಾಲ್ ಪೆವಿಲಿಯನ್, ಚಾಂಪಿಯನ್ ಲೀಗ್’ನ ಚಾಂಪಿಯನ್ ಪ್ರಶಸ್ತಿಯನ್ನು ರಾಯಲ್ ಎಫ್.ಸಿ ಗೂನಡ್ಕ ತಮ್ಮದಾಗಿಸಿಕೊಂಡರೆ,
ರನ್ನರ್ ಪ್ರಶಸ್ತಿಯನ್ನು ರೊಸಿ ಬ್ಲಾಸ್ಟರ್ಸ್ ಪಡೆದುಕೊಂಡರು.
ಹಾಗೂ ವೈಯಕ್ತಿಕ ಗೋಲ್ ಕೀಪರ್ ಪ್ರಶಸ್ತಿಯನ್ನು ಅಫ್ರಿ,
ಬೆಸ್ಟ್ ಡಿಫೆಂಡರ್ ಜುನೈದ್,
ಪ್ಲೆ ಮೇಕರ್ ಅಪ್ಪಾದು,
ಟಾಪ್ ಸ್ಕೋರರ್ & ಎಮರ್ಜಿಂಗ್ ಪ್ಲೆಯರ್ ಆಗಿ ನಶ್ವಾನ್,
ಪ್ಲೆಯರ್ ಆಫ್ ದಿ ಮುಮೆಂಟ್ ರಮ್ಮಿ ಕಾಸರಗೋಡು, ಪಡೆದುಕೊಂಡರು.
ಅದೇ ರೀತಿ 2023-24 ನೇ ಆವೃತ್ತಿಯ ಗೋಲ್ಡನ್ ಬಾಯ್ ಅವಾರ್ಡ ನ್ನು ಶುಹೈಬ್ (ಸಿಯಾ),
ಗೋಲ್ಡನ್ ಗ್ಲೋವ್ ಮಾಝ್,
ಪ್ರತಿಷ್ಠಿತ ಬಾಲನ್ ಡಿಯೊರ್ ಪ್ರಶಸ್ತಿಯನ್ನು ಶಾಹುಲ್ ಹಮೀದ್ (ಅಮ್ಮಿ) ಪಡೆದುಕೊಂಡರು.
ಪಂದ್ಯಕೂಟದ ನಡುವೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಪಂದ್ಯಾಕೂಟಕ್ಕೆ ಇನ್ನಷ್ಟು ಮೆರಗನ್ನು ನೀಡಿತು
ಹಾಗೂ ರಾಜ್ಯ ಕಂಡ ಶ್ರೇಷ್ಠ ಮಟ್ಟದ ತೀರ್ಪುಗಾರರು, ಜಿಲ್ಲೆ ಕಂಡ ಅತ್ಯುತ್ತಮ ವೀಕ್ಷಕ ವಿವರಣೆಗಾರರು, ಹಾಗೂ ಯೂಟ್ಯೂಬ್ ಲೈವ್ ಟೆಲಿಕಾಸ್ಟ್ ಕೂಡ ಕಲ್ಪಿಸಲಾಗಿತ್ತು. ಈ ಪಂದ್ಯಾಕೂಟಕ್ಕೆ ಪ್ರಾಯೋಜಕತ್ವ ನೀಡಿದ ಗಲ್ಫ್ ಕಮಿಟಿ ಹಾಗೂ ಮುನಾಫರ್ ಜೊತೆ ಸೇರಿ ಅಚ್ಚು, ರಿಝ್ವಾನ್, ಚಮ್ಮು, ಅಬ್ಬಿ, ಶೆಫೀಕ್, ಉರ್ಶಾನ್ ಇವರ ಸಾರಥ್ಯದಲ್ಲಿ ಪಂದ್ಯಾಕೂಟವು ಯಶಸ್ವಿಯಾಗಿ ನಡೆಯಿತು.