33 ಕಾವು – ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.14 ರಂದು ಗುರುವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು ಸುಳ್ಯ ವಿದ್ಯುತ್ ಸಬ್ ಸ್ಟೇಷನ್ ನಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.