ಚಿತ್ರದುರ್ಗ ಮೂಲದ ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬ ವೃದ್ಧ ದಂಪತಿಗಳು ಕಳೆದ ಆರು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಗುಡಿಸಲು ಕಟ್ಟಿ ವಾಸಿಸುತ್ತಿದ್ದರು. ಮೊನ್ನೆ ಏಕಾಏಕಿ ಅಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿ ಮನೆಯ ವಸ್ತುಗಳನ್ನು ಹೊರಗೆ ಎಸೆದು ಜೆಸಿಬಿ ಬಳಸಿ ಮನೆಯನ್ನು ದ್ವಂಶ ಮಾಡಿದ್ದು ಇದು ಅಮಾನವೀಯ ಕೃತ್ಯ. ವೃದ್ಧ ದಂಪತಿಗಳು ಕಣ್ಣೀರು ಸುರಿಸಿ ಕಾಡಿಬೇಡಿದರೂ ಅಧಿಕಾರಿಗಳ ಮನಸ್ಸು ಕರಗಲಿಲ್ಲ, ಉತ್ತರ ಪ್ರದೇಶದ ಬುಲ್ಡೋಜರ್ ಸಂಸ್ಕೃತಿ ಈಗ ದಕ್ಷಿಣ ಕನ್ನಡ ಜಿಲ್ಲೆಗೂ ಆಗಮಿಸಿದಂತಿದೆ. ಒಟ್ಟಾರೆಯಾಗಿ ಅಧಿಕಾರಿಗಳ ಪೊಲೀಸರ ಈ ಒಂದು ನಡೆಯನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿಯ ಇಂಡಿಯಾ ನೆಲ್ಯಾಡಿ ಗ್ರಾಮ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಮತ್ತು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತದೆ. ಜಿಲ್ಲಾಡಳಿತವು ಕೂಡಲೇ ಕನಿಕರ ತೋರಿ ಈ ಒಂದು ವೃದ್ದ ದಂಪತಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ನೆಲ್ಯಾಡಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಸಿದ್ದೀಕ್ ಮಣ್ಣಗುಂಡಿ ಯವರು ಆಗ್ರಹಿಸಿದ್ದಾರೆ.