“ಬದಲಾವಣೆಯ ಭಾಗವಾಗಿರಿ”- ಕೆಸಿಎಫ್ ಬಹರೈನ್ ಮನಾಮ ಸೆಕ್ಟರ್ ನೂತನ ಸಾರಥಿಗಳು.
ಕೆಸಿಎಫ್ ಬಹರೈನ್ ಮನಾಮ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಯು ದಿನಾಂಕ 1ನೇ ನವೆಂಬರ್ 2024 ರ ಶುಕ್ರವಾರದಂದು ಅವಾಲ್ ಹೋಟೆಲಿನ ಸಭಾಂಗಣದಲ್ಲಿ ನೆರವೇರಿತು.
ದುಆ ಮಜ್ಲಿಸ್ ಮತ್ತು ಅಸ್ಮಾಉಲ್ ಹುಸ್ನಾ ಮಜ್ಲಿಸ್ ಮೂಲಕ ಪ್ರಾರಂಭವಾದ ಈ ಮಹಾಸಭೆಯ ಅಧ್ಯಕ್ಷೀಯ ಭಾಷಣ ವನ್ನು ಸೆಕ್ಟರಿನ ಅಧ್ಯಕ್ಷರಾದ ಜ।ಅಹ್ಮದ್ ಮುಸ್ಲಿಯಾರ್, ಘಟ್ಟಮನೆಯವರು ನಡೆಸಿದರು.
ನಿರೂಪಣೆಯನ್ನು ಜ।ಮಜೀದ್ ಝುಹ್ರಿ ಉಸ್ತಾದ್ ಸುಳ್ಯ ರವರು ನೆರವೇರಿಸಿದರು. ಕಮಿಟಿಯ ಕಾರ್ಯಕಾರಿ ಸದಸ್ಯರಾದ ಜ।ಸಮದ್ ಉಜಿರೆಬೆಟ್ಟುರವರು ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.
ಸೆಕ್ಟರಿನ ಜನರಲ್ ಸೆಕ್ರೆಟರಿ ಹಾಜಿ ನಝೀರ್ ದೇರಳಕಟ್ಟೆಯವರು ವಾರ್ಷಿಕ ವರದಿಯನ್ನು ವಾಚಿಸಿದರು ಮತ್ತು ಖಜಾಂಜಿ ಜ।ಸಮದ್ ಮಾದಾಪುರ ರವರು ಲೆಕ್ಕ ಪತ್ರ ಮಂಡಿಸಿದರು.
ಮನಾಮ ಸೆಕ್ಟರಿನ ನೂತನ ಸಾರಥಿಗಳು
ಅಧ್ಯಕ್ಷರು : ಜ। ಇಬ್ರಾಹಿಂ ಉಸ್ತಾದ್, ಕುಕ್ಕಿಲ
ಪ್ರಧಾನ ಕಾರ್ಯದರ್ಶಿ : ಜ।ಯೂಸುಫ್ ಬಜಗೋಳಿ.
ಕೋಶಾಧಿಕಾರಿ : ಜ।ಖಾಸಿಂ ಕೊಪ್ಪಳ.
ಉಪಾಧ್ಯಕ್ಷರು : ಜ।ಬದ್ರುದ್ದೀನ್ ಮಂಚಿ.
ಸಂಘಟನಾ ಇಲಾಖೆ
ಕಾರ್ಯದರ್ಶಿ : ಜ। ಮುಸ್ತಫ, ಉಳ್ಳಾಲ.
ಶಿಕ್ಷಣ ಇಲಾಖೆ
ಕಾರ್ಯದರ್ಶಿ : ಜ। ಇಸ್ಮಾಯಿಲ್ ಸಅದಿ ಉಸ್ತಾದ್
ಸಾಂತ್ವನ ಇಲಾಖೆ
ಕಾರ್ಯದರ್ಶಿ : ಜ। ಶಮೀರ್, ಉಜಿರೆ.
ಪ್ರಕಾಶನಾ ಇಲಾಖೆ
ಕಾರ್ಯದರ್ಶಿ : ಜ। ನಾಸ್ಸರ್ ಮಂಜೇಶ್ವರ.
ಇಹ್ಸಾನ್ ಇಲಾಖೆ
ಕಾರ್ಯದರ್ಶಿ : ಜ। ಇರ್ಷಾದ್ ಕರೋಪಾಡಿ.
ಆಡಳಿತ ಮತ್ತು ಸಂಪರ್ಕ ಇಲಾಖೆ
ಕಾರ್ಯದರ್ಶಿ : ಜ। ಮುಝಮ್ಮಿಲ್ ಕೋಲ್ಪೆ,
ಕಾರ್ಯಕಾರಿ ಸಮಿತಿ ಸದಸ್ಯರುಗಳು
ಹಾಜಿ ಅಬೂಬಕ್ಕರ್ ಮಾದಾಪುರ,
ಹಾಜಿ ನಝೀರ್ ದೇರಳಕಟ್ಟೆ,
ಜ। ಸಮದ್ ಮಾದಾಪುರ,
ಜ। ಅಶ್ರಫ್ ಕಿನ್ಯ,
ಜ। ಕರೀಂ ಮಾಝ,
ಜ। ಮಜೀದ್ ಝುಹ್ರಿ ಸುಳ್ಯ,
ಜ। ಅಹ್ಮದ್ ಮುಸ್ಲಿಯಾರ್ ಘಟ್ಟಮನೆ,
ಜ। ಸಮದ್ ಉಜಿರೆಬೆಟ್ಟು ,
ಜ। ಹನೀಫ್ ಉಸ್ತಾದ್,
ಜ। ಹನೀಫ್ ಕಿನ್ಯ ,
ಜ। ಶಬೀರ್ ಮಠ ,
ಜ। ಅತ್ತಾವುಲ್ಲಾ ಉಜಿರೆಬೆಟ್ಟು ,
ಜ। ಸವಾದ್ ಉಳ್ಳಾಲ,
ಜ। ಶಾಫಿ ಕಬಕ,
ಜ। ಅಲ್ಪಾಝ್ ಬಜಾಲ್,
ಜ। ನಶೀದ್ ಧರ್ಮಸ್ಥಳ,
ಜ। ಮುಹಮ್ಮದ್ ಸಖಾಫಿ ಉಸ್ತಾದ್, ತೋಕೆ,
ಜ। ಅಲೀಮ್ ಅಹ್ಮದ್ ಕಾಪು.
ಕಾರ್ಯಕ್ರಮಕ್ಕೆ ವಿಶೇಷವಾಗಿ ಆಮಂತ್ರಿಸಲಾದ ಕಮ್ಯುನಿಕೇಷನ್ ಮತ್ತು ಪರ್ಸನಲ್ ಗ್ರೋಥ್ ಟ್ರೈನರ್ ಜ। ಮುಹಮ್ಮದ್ ನಿಜ್ಲಾಸ್ ರವರು ಸಂಘಟನೆ ಮತ್ತು ಜವಾಬ್ದಾರಿಗಳು ಎನ್ನುವ ವಿಷಯದ ಬಗ್ಗೆ ಉಪಯುಕ್ತ ಸಂದೇಶ ಕೊಟ್ಟರು.
ಕೆ ಸಿ ಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜ। ಜಮಾಲುದ್ದೀನ್ ವಿಟ್ಟಲ್ ರವರು ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಕೆ ಸಲ್ಲಿಸಿದರು.
ಮನಾಮಾ ಸೆಕ್ಟರಿನ ನೂತನ ಅಧ್ಯಕ್ಷರಾದ ಜ। ಇಬ್ರಾಹಿಂ ಮುಸ್ಲಿಯಾರ್ ಕುಕ್ಕಿಲ ಇವರು ನೂತನ ಕಾರ್ಯಕಾರಿ ಸಮಿತಿಗೆ ತನ್ನ ಅಮೂಲ್ಯ ಸಲಹೆ ಮತ್ತು ಜವಾಬ್ದಾರಿಗಳ ಬಗ್ಗೆ ಉಪದೇಶ ನೀಡಿದರು.
ಕಾರ್ಯಕ್ರಮದ ಅಂಗವಾಗಿ ವಿಶೇಷ ಶೈಲಿಯ ಉಪಹಾರ ವ್ಯವಸ್ಥೆಯನ್ನು ಕರೀಂ ಮಾಝ, ಅಶ್ರಫ್ ಕಿನ್ಯ, ಇರ್ಷಾದ್ ಕರೋಪಾಡಿ, ಮುಝಮ್ಮಿಲ್ ಕೋಲ್ಪೆ ಮತ್ತು ಇನ್ನಿತರ ಸದಸ್ಯರು ಏರ್ಪಡಿಸಿದ್ದರು.
ಅಂತಿಮವಾಗಿ ಜ। ಸಮದ್ ಮಾದಾಪುರ ರವರು ಧನ್ಯವಾದ ಸಲ್ಲಿಸುವುದರೊಂದಿಗೆ ಮಹಾಸಭೆಯನ್ನು ಕೊನೆಗೊಳಿಸಲಾಯಿತು.