ಹತ್ತನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನರಾದ ಅಘಾತಕಾರಿ ಘಟನೆ ಮೂಡುಬೆಳ್ಳೆ ಬಳಿ ಜುಲೈ 3 ರಂದು ನಡೆದಿದೆ.
ಮೃತರನ್ನು ಮೂಡುಬೆಳ್ಳೆಯ ಸೇಂಟ್ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ (16) ಎಂದು ಗುರುತಿಸಲಾಗಿದೆ.
ಮೃತರು ತಂದೆ ಪಳ್ಳಿದಡಬೆಟ್ಟು ಜಯರಾಮ ಆಚಾರ್ಯ, ತಾಯಿ ಚಂದ್ರಿಕಾ ಅವರನ್ನು ಅಗಲಿದ್ದಾರೆ.ಬೆಳಗ್ಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆಕೆಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂದು ತಿಳಿದುಬಂದಿದೆ.
ಭಾಗ್ಯಶ್ರೀ ಅವರ ನಿಧನಕ್ಕೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿ ಸಮೂಹ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಗೌರವಾರ್ಥ ಇಂದು ಶಾಲೆಗೆ ರಜೆ ನೀಡಲಾಗಿದೆ.