ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ೫೫೦ ಕೆ ಜಿ ವಿಭಾಗದ ಮುಕ್ತ ಹಗ್ಗಜಗ್ಗಾಟ ಮತ್ತು ಕ್ರೀಡಾಕೂಟ ನ.೧೭ರಂದು ದುಗಲಡ್ಕದಲ್ಲಿ ನಡೆಯಿತು.

ಕ್ರೀಡಾ ಕೂಟವನ್ನು ಮಾಜಿ ಜಿ.ಪಂ.ಸದಸ್ಯರಾದ ಧನಂಜಯ ಅಡ್ಡಂಗಾಯ ನೆರವೇರಿಸಿದರು. ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯತ್‌ ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ, ಸುಳ್ಯ ಪಯಸ್ವಿನಿ ಸೀನಿಯರ್ ಛೇಂಬರ್ ಅಧ್ಯಕ್ಷ ಚಂದ್ರಶೇಖರ ನಂಜೆ, ಮಲ್ಲಿಕಾರ್ಜುನ ಕನ್‌ಸ್ಟ್ರಕ್ಷನ್ ಮಾಲಕ ಅಶ್ವಿನ್ ನಡುಮುಟ್ಟು, ಬೆಂಗಳೂರು ಇಂಡಿಯನ್ ಡಿಸೈನ್ ಪ್ರೈ.ಲಿ.ನ ವೆಂಕಟೇಶ್‌ ಮೇನಾಲ, ಯುವಕ ಮಂಡಲದ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ಕೊಯಿಕುಳಿ ಅತಿಥಿಯಾಗಿ ಭಾಗವಹಿಸಿದ್ದರು. ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುರಲ್ ತುಳುಕೂಟದ ಅಧ್ಯಕ್ಷ ರಮೇಶ್‌ ನೀರಬಿದಿರೆ ಸ್ವಾಗತಿಸಿ, ಕಾರ್ಯದರ್ಶಿ ಕೆ.ಟಿ.ಭಾಗೀಶ್ ವಂದಿಸಿದರು. ಗೌರವಾಧ್ಯಕ್ಷೆ ನವ್ಯ ದಿನೇಶ್ ಕೊಯಿಕುಳಿ ಕಾರ್ಯಕ್ರಮ ನಿರೂಪಿಸಿದರು

ಬಳಿಕ ಕ್ರೀಡಾ ಕೂಟ ಮತ್ತು ಹಗ್ಗ ಜಗ್ಗಾಟ ನಡೆಯಿತು. ಸಂಜೆ ಬಹುಮಾನ ವಿತರಣೆಯನ್ನು ಮಂಗಳೂರು ಡೆಲ್ಟ ಸಿಸ್ಟಂ ಮಾಲಕರಾದ ಉಮೇಶ್ ಬಿ.ಕಾಮತ್ ನೆರವೇರಿಸಿದರು.

ಅಧ್ಯಕ್ಷತೆಯನ್ನು ಕುರಲ್ ತುಳುಕೂಟದ ಅಧ್ಯಕ್ಷ ರಮೇಶ್‌ ನೀರಬಿದಿರೆ ವಹಿಸಿದ್ದರು. ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ, ಸುಳ್ಯ ಇನ್ಸ‌ರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಚಿಂತನ ಸುಬ್ರಹ್ಮಣ್ಯ ಮಾಣಿಬೆಟ್ಟು, ದುಗ್ಗಲಡ್ಕ ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕೊಳಂಜಿಕೋಡಿ, ಸಾಮಾಹಿಕ ಧುರೀಣ ಮಹೇಶ್ ಬೆಳ್ಳಾರ್ಕರ್ ಭಾಗವಹಿಸಿದ್ದರು. ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಸ್ವಾಗತಿಸಿ, ಯುವಕ ಮಂಡಲದ ಮಾಜಿ ಅಧ್ಯಕ್ಷ ಭವಾನಿಶಂಕರ ಕಲ್ಮಡ್ಕ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ವಂದಿಸಿದರು. ನವ್ಯ ದಿನೇಶ್ ಕೊಯಿಕುಳಿ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಚೇತನ್‌ ಕಲ್ಮಡ್ಕ, ಕಾರ್ಯದರ್ಶಿ ಜಯಂತ್ ಕೊಯಿಕುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ನ್ಯೂ ಫ್ರೆಂಡ್ಸ್ ಬೊಮ್ಮಾರು ಎ ಪ್ರಥಮ, ಯುವತ ಅರಮಂಗನಮ್ ದ್ವಿತೀಯ, ನ್ಯೂ ಫ್ರೆಂಡ್ಸ್ ಬೊಮ್ಮಾರು ಬಿ ತೃತೀಯ ಹಾಗೂ ಆತ್ಮೀಯ ಪೆರ್ಣೆ ಚತುರ್ಥ ಬಹುಮಾನ ಪಡೆದುಕೊಂಡರು.

Leave a Reply

Your email address will not be published. Required fields are marked *