Advertisement

ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ವತಿಯಿಂದ ಸಸಿ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವು
ದಿನಾಂಕ ಜೂನ್ 25 ರಂದು ಪೈಚಾರ್ ಬದ್ರಿಯ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆ ಹಾಗೂ ದುಆ ವನ್ನು
ಬಿ.ಜೆ.ಎಂ ಇದರ ಖತೀಬಾರದ ಶಮೀರ್ ಅಹ್ಮದ್ ನಯಿಮಿ ನೇರವೆರಿಸಿ, ಇಸ್ಲಾಂನಲ್ಲಿ ಮರ ಗಿಡಗಳ ಬೆಳವಣಿಗೆಯ ಕಾಳಾಜಿ, ಮಹತ್ವದ ಬಗ್ಗೆ ತಿಳಿಸಿದರು. ಪ್ರಸ್ತುತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಅಧ್ಯಕ್ಷರಾದ ಅಬೂಸಾಲಿ ಕೆಪಿ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಖುವ್ವತ್ತುಲ್ ಇಸ್ಲಾಂ ಮದರಸದ ವಿದ್ಯಾರ್ಥಿ ಕಳೆದ ಸಾಲಿನ ಮದರಸದ ಪಬ್ಲಿಕ್ ಪರೀಕ್ಷೆಯಲ್ಲಿ ಸುಳ್ಯ ರೇಂಜಿಗೆ ಪ್ರಥಮ ಸ್ಥಾನವನ್ನು ಪಡೆದ ಬಿಜೆಎಮ್ ಇದರ ಉಪಾಧ್ಯಕ್ಷರಾದ ರಝಾಕ್ ಪೈಚಾರ್ ಇವರ ಪುತ್ರಿ ‘ಖದಿಜತ್ತುಲ್ ಸಲ್ವಾ’, ಹಾಗೂ SSLC ಯಲ್ಲಿ ಪ್ರಥಮ ಸ್ಥಾನ ಪಡೆದ ಸರ್ಪುದ್ದೀನ್ ಪೈಚಾರ್ ಇವರ ಪುತ್ರಿಯಾದ ‘ಶಮ್ನಾ’ ಪೈಚಾರ್ ಇವರನ್ನು ಸನ್ಮಾನಿಸಲಾಯಿತು.

ಸಸಿ ವಿತರಣೆಯನ್ನು ಉಪ ವಲಯ ಅರಣ್ಯಧಿಕರಿಗಳಾದ ವೀರಭದ್ರಯ್ಯ ನೆರವೇರಿಸಿದರು, ಪ್ರಾಸ್ತವಿಕ ಭಾಷಣದಲ್ಲಿ‌ ಅಲ್ ಅಮೀನ್ ಸಂಘಟನೆಯ ಸಾಮಾಜಿಕ ಕಾಳಜಿ ಕುರಿತು ಶ್ಲಾಘನೀಯ ಮಾತುಗಳನ್ನಾಡಿದರು. ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯರಾದ ಮುಜೀಬ್ ಪೈಚಾರ್ ಮಾತನಾಡಿ ಕಾನೂನು ಬಾಹಿರವಾಗಿ ಮರ ಕಡಿಯುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ಮನವಿಯಿತ್ತರು, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ಅಧ್ಯಕ್ಷರಾದ ಬಶೀರ್ ಆರ್ ಬಿ ಯವರು ಪ್ರಾಸ್ತಾವಿಕ ಮಾತನಾಡುವ ಸಂಧರ್ಭದಲ್ಲಿ ಕೆಇಬಿ ವಿರುದ್ಧ ಅಸಮಧಾನ ಹೊರಹಾಕಿದರು, ಕಳೆದ ಏಳು ವರ್ಷಗಳ ಹಿಂದೆ ಅಲ್ ಅಮೀನ್ ಸಂಘಟನೆ ನೆಟ್ಟು ಪೋಷಿಸಿದ ಬಾದಾಮಿ ಮರವನ್ನು, ಕೆಇಬಿಯವರು ಬುಡ ಸಮೇತ ಕಡಿದಿದ್ದಾರೆ, ಇದಕ್ಕೆ ಯಾರು ಹೊಣೆ, ಇಲ್ಲಿಯವರೆಗೂ ಇದರ ವಿರುದ್ದ, ಸಂಬಂದ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.


ಈ ಕಾರ್ಯಕ್ರಮದ ವೇದಿಕೆಯಲ್ಲಿ ಸುಳ್ಯದ ಉಪ ವಲಯ ಅರಣ್ಯಧಿಕಾರಿಗಳಾದ ಯಶೋಧರ, ಬದ್ರಿಯ ಜುಮಾ ಮಸೀದಿ ಅಧ್ಯಕ್ಷರಾದ ಶರೀಫ್ ಟಿಎ, ಪಿಸ್ ಸ್ಕೂಲ್ ಕುಂಬರ್ಚೋಡ್ ಇದರ ಸ್ಧಾಪಕದ್ಯಕ್ಷರಾದ ಹಾಜಿ ಅಬೂಬಕ್ಕರ್ ಬೊಳುಬೈಲು, ಜಾಲ್ಸೂರು ಬೀಟ್ ಪೋಲಿಸ್ ರಮೇಶ್, ಬಿಜೆಎಮ್ ಪ್ರಧಾನ ಕಾರ್ಯದರ್ಶಿ ಹನೀಫ್ ಪಿಕೆ, ರೈತ ಸಂಘ ಸುಳ್ಯ ತಾಲೂಕಿನ .‌ ಸಂಚಾಲಕರಾದ ಸಬಾಸ್ಟಿನ್ ಮಡಪ್ಪಾಡಿ, ಪ್ರಗತಿ ಸೌಂಡ್ಸ್ ಇದರ ಮಾಲಕರಾದ ಶಾಫೀ ಪ್ರಗತಿ, ಹಾಗೂ ಕೃಷಿಕಾರದ ಅಹಮದ್ ಪೈಚಾರ್, ಹಾಗೂ ಅಲ್ ಅಮೀನ್ ಯೂತ್ ಸೆಂಟರ್ ಇದರ ಸರ್ವ ಸದಸ್ಯರುಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ‌ಇದರ ಸದಸ್ಯರಾದ ‌ಅಬ್ದುಲ್ ಸತ್ತಾರ್ ಪಿಎ.ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ