ಸುಳ್ಯ: ಇದೇ ಬರುವ ತಾರೀಕು 29 ರಂದು ಅನ್ಸಾರಿಯಾ ಕ್ಯಾಂಪಸ್ ನಲ್ಲಿರುವ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನೆ ಗೊಳ್ಳಲಿದೆ. ಈ ಒಂದು ಕಾರ್ಯಕ್ರಮಕ್ಕೆ ಅಂತರರಾಜ್ಯ ಮಟ್ಟದ ಉಮರಾಗಳು, ನೇತಾರರು, ರಾಜಕೀಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸುಳ್ಯ ಜನರ ಕನಸಿನ ಕೂಸಾಗಿರುವ ಅನ್ಸಾರಿಯ ಆಡಿಟೋರಿಯಂ ಉದ್ಘಾಟನೆಯ ಪ್ರಯುಕ್ತ, ಬೋರುಗುಡ್ಡೆ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ಇವರು ಅನ್ಸಾರಿಯ ರಸ್ತೆಯನ್ನು ಜೆಸಿಬಿ ಮೂಲಕ ಸರಿ ಪಡಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.