ಪೈಚಾರು: ಶಾಂತಿನಗರ ತಿರುವಿನಲ್ಲಿರುವ ಉಮ್ಮರ್ ಎಂಬುವವರ ಅಂಗಡಿಗೆ ರಾತ್ರಿ ಸಮಯ ಕಳ್ಳನೊಬ್ಬ ಅಂಗಡಿಯ ಮೇಲ್ಬಾಗದಿಂದಾಗಿ ಅಂಗಡಿಯೊಳಗೆ ನುಸುಳಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕಳ್ಳನ ಕುಕೃತ್ಯ ದೃಶ್ಯ ಸಿಸಿ ಟಿವಿ ಯಲ್ಲಿ ಸರೆಯಾಗಿದೆ.

ಈ ಕಳ್ಳತನ ನ. 25 ರಂದು ರಾತ್ರಿ ಸರಿ ಸುಮಾರು 12ಗಂಟೆ ಸಮಯದಲ್ಲಿ ನಡೆದಿದ್ದು ಅಂಗಡಿ ಮಾಲಕ ಮಾರನೇ ದಿನ ಬೆಳಿಗ್ಗೆ ಅಂಗಡಿ ತೆರೆದಾಗ ಕಳ್ಳತನ ನಡೆದಿರುವ ಬಗ್ಗೆ ತಿಳಿದುಬಂದಿದೆ.

ಕಳ್ಳತನವಾದದ್ದು ಸ್ವಲ್ಪ ಚಿಲ್ಲರೆ ಹಣ ಮಾತ್ರ ಎಂಬ ಕಾರಣಕ್ಕಾಗಿ ಈ ವಿಷಯವನ್ನು ಅಂಗಡಿಯವರು ಗಂಭೀರವಾಗಿ ಪರಿಗಣಿಸಲಿಲ್ಲ. ಇಂದು ಸ್ಥಳೀಯರು ಅವರ ಸಿಸಿ ಟಿವಿ ಯಲ್ಲಿ ಪರಿಶೀಲನೆ ನಡೆಸಿದಾಗ ಕಳ್ಳನ ಎಲ್ಲಾ ರೀತಿಯ ಚಲನವಲನಗಳು ಕಂಡು ಬಂದಿದೆ.

ಅದೇ ದಿನ ಕನಕಮಜಲು ಭಾಗದಲ್ಲಿಯೂ ಇದೇ ರೀತಿಯ ಅಂಗಡಿ ಕಳ್ಳತನವಾದ ಬಗ್ಗೆ ತಿಳಿದು ಬಂದಿದ್ದು, ಅಲ್ಲದೆ ಇದೇ ರೀತಿಯ ಘಟನೆ ಸುಳ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದು, ಈ ಎಲ್ಲಾ ಕಳ್ಳತನದ ಹಿಂದೆ ಈತನದೇ ಕೈವಾಡವಿರಬಹುದೆಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *