ಮಂಗಳೂರು : ಸುಳ್ಯದಲ್ಲಿ ಜುಲೈ 6 ರಂದು ನಡೆಯಲಿರುವ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ. ಎಂ. ಶಹೀದ್ ರವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಪಶ್ಚಿಮ ವಲಯ ಐಜಿ ಯವರಾದ ಅಮಿತ್ ಸಿಂಗ್ ರವರನ್ನು ಭೇಟಿಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಅಭಿನಂದನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಸಮಿತಿ ಸದಸ್ಯರುಗಳಾದ ಕೆ. ಎಂ. ಮುಸ್ತಫ, ಪರಶುರಾಮ ಚಿಲ್ತಡ್ಕ, ಮಹಮ್ಮದ್ ಇಕ್ಬಾಲ್ ಎಲಿಮಲೆ , ರಂಜಿತ್ ರೈ ಮೇನಾಲ, ರಾಧಾಕೃಷ್ಣ ಬೊಳ್ಳೂರು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *