ಸುಳ್ಯ: ಸುಳ್ಯ ನಗರ ಪ್ರದೇಶದಲ್ಲಿ ಕೆಳದಿನಗಳಿಂದೀಚೆಗೆ ಕಳ್ಳತನ ಪ್ರಕರಣ ತುಂಬಾ ಹೆಚ್ಚಾಗುತ್ತಿದೆ. ಇದೀಗ ಪೈಚಾರಿನಲ್ಲಿ ಕಾರ್ಯಚರಿಸುತ್ತಿರುವ ಹೋಟೆಲ್ ಫುಡ್ ಪಾಯಿಂಟ್‌ಗೆ ನಿನ್ನೆ ತಡರಾತ್ರಿ ಕಳ್ಳರು ನುಗ್ಗಿ ನಗದು ಕದ್ದೊಯ್ದಿದ್ದಾರೆಂದು ತಿಳಿದುಬಂದಿದೆ.
ಕಳೆದ ಒಂದು ವಾರ ಮೊದಲು ಇದೇ ರೀತಿ ಅಂಗಡಿಯವೊಂದಕ್ಕೆ ನುಗ್ಗಿದ್ದ ಕಳ್ಳರು ಹಣವನ್ನು ಕದ್ದಿದ್ದ ದೃಶ್ಯ ಸಿಸಿ ಟಿವಿಯಲ್ಲಿ ದೊರಕಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಘಟನೆ ಕಳೆದು ಒಂದು ವಾರ ಮಾಸುವ ಮುನ್ನವೇ ಮತ್ತೆ ಅದೇ ಪರಿಸರದಲ್ಲಿ ಕಳ್ಳತನವಾಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಹೋಟೆಲ್‌ನಲ್ಲಿನ ಕ್ಯಾಶ್ ಕೌಂಟರ್ ಮತ್ತು ಅದರ ಹೊರಭಾಗದಲ್ಲಿ ಸುಮಾರು ಹರಿಕೆ ಡಬ್ಬಿಗಳು ಇದ್ದು ಕಳ್ಳರು ಇವೆಲ್ಲವನ್ನೂ ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಂದಾಜು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮೊತ್ತದ ಹಣ ಕಳ್ಳತನವಾಗಿರುವ ಬಗ್ಗೆ ಹೋಟೆಲ್ ಮಾಲಕರು ತಿಳಿಸಿದ್ದಾರೆ.
ಪೈಚಾರು ಮತ್ತು ಸುಳ್ಯದಲ್ಲಿ ಸರಣಿ ಕಳ್ಳತನಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಪೊಲೀಸ್ ಇಲಾಖೆಯವರು ಏಕೆ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದಾಗಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವೈಫಲ್ಯ ಆಗುತ್ತಿದೆಯೇ ಇದೆಕೆಲ್ಲ ಕಡಿವಾಣ ಯಾವಗ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.