ಮಂಗಳೂರು: ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಅಮಲು ಬರಿಸುವ ಸುಮಾರು 100 ಕೆಜಿ ಭಾಂಗ್ ಚಾಕೊಲೇಟ್​ ಸೀಜ್ ಮಾಡಿದ್ದಾರೆ. ಭಾಂಗ್ ಚಾಕ್ಲೇಟ್​ನಲ್ಲಿ ಗಾಂಜಾ ಮಿಕ್ಸ್ ಮಾಡಿದ ಶಂಕೆಯಿದೆ. ಉತ್ತರ ಭಾರತದಿಂದ ಚಾಕ್ಲೇಟ್ ತಂದು ₹30ಗೆ ಒಂದರಂತೆ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡ್ತಿದ್ದ ಆರೋಪವಿದೆ. ನಗರದ ಕಾರ್ ಸ್ಟ್ರೀಟ್ ಹಾಗು ಹೈಲ್ಯಾಂಡ್ ಎಂಬಲ್ಲಿ ಮಾರಾಟ ಮಾಡ್ತಿದ್ದ ಬಗ್ಗೆ ಮಾಹಿತಿ ಪಡೆದು ಸೀಜ್ ಮಾಡಿದ್ದಾರೆ.

ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್, ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿ ಮನೋಹರ್ ಶೇಟ್ ಅನ್ನೋರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ರಹಸ್ಯವಾಗಿ ಅಂಗಡಿಯ ಮಾಲೀಕರು ಸೇಲ್ ಮಾಡುತ್ತಿದ್ದರಂತೆ. ಮಹಾಶಕ್ತಿ ಮುನಕ್ಕಾ, ಬಮ್‌ಬಮ್ ಮುನೆಕ್ಕಾವಟಿ, ಪಾವರ್ ಮುನಕ್ಕಾ ವಟಿ ಹಾಗೂ ಆನಂದ ಚೂರ್ಣ ಹೆಸರಿನ ಭಾಂಗ್ ಚಾಕೊಲೇಟ್​ಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಮಂಗಳೂರಿನ ನಗರದ ಕಾರ್ ಸ್ಟ್ರೀಟ್ ಹಾಗೂ ಹೈಲ್ಯಾಂಡ್ ಎಂಬಲ್ಲಿನ‌ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ ಈ ಕುರಿತಂತೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಚಾಕೊಲೇಟ್ ನಲ್ಲಿ ಮಾದಕದ್ರವ್ಯ ಇರುವ ಮಾಹಿತಿ ಲಭ್ಯವಾಗಿತ್ತು. ದಾಳಿಯ ಸಂದರ್ಭದಲ್ಲಿ 108 ಕೆಜಿ ಭಾಂಗ್ ವಶಕ್ಕೆ ಪಡೆದಿದ್ದೇವೆ. ಭಾಂಗ್ ಚಾಕೊಲೇಟ್ ಅನ್ನು ಎಫ್​ಎಸ್​ಎಲ್ ವರದಿಗೆ ಕಳುಹಿಸಿದ್ದೇವೆ. ಈ ಚಾಕೊಲೇಟ್ ನಲ್ಲಿ ಮಾದಕ ದ್ರವ್ಯ ಖಂಡಿತಾ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದೇವೆ. ಈ ಚಾಕೊಲೇಟ್ ಮಾರಾಟ ಮಾಡಿದ ಆರೋಪಿಗಳಿಗೆ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೇ, ವರದಿ ಬಂದ ಮೇಲೆ ಎನ್ ಡಿ ಪಿ ಎಸ್ ಪ್ರಕರಣ ದಾಖಲು ಮಾಡಲಿದ್ದೇವೆ. ಆರೋಪಿಗಳು ಈ ಚಾಕೊಲೇಟ್​​​ನ್ನು ಉತ್ತರ ಪ್ರದೇಶ ದಿಂದ ತರಿಸುತ್ತಿದ್ದರು. ಬಾಂಗ್ ಬಗ್ಗೆ ತಜ್ಞರ ಮಾಹಿತಿಯನ್ನು ಕೇಳಿದ್ದೇವೆ. ಆರೋಪಿಗಳು ಪಾನ್ ಬೀಡಾ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಬಾಂಗ್ ಚಾಕೊಲೇಟ್ ಬಗ್ಗೆ ವಿದ್ಯಾರ್ಥಿಗಳೇ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಡ್ರಗ್ಸ್ ವಿಚಾರದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಗಾರ ಮಾಡುತ್ತಿದ್ದೇವೆ. ಮಾಹಿತಿ ಆಧಾರದ ಮೇಲೆ ನಗರದ ನೂರಕ್ಕೂ ಅಧಿಕ ಅಂಗಡಿಗಳಿಗೆ ಪರಿಶೀಲನೆ ಮಾಡಿದ್ದೇವೆ. ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುತ್ತೇವೆ ಎಂದು ಕಮಿಷನರ್ ತಿಳಿಸಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ