ಮಾನವ ಹಕ್ಕುಗಳು ಜನರ ದೊಡ್ಡ ಕಾಳಜಿಯನ್ನು ಪರಿಹರಿಸುವಲ್ಲಿ ತಡೆಗಟ್ಟುವ, ರಕ್ಷಣಾತ್ಮಕ ಮತ್ತು ಪರಿವರ್ತಕ ಶಕ್ತಿಯಾಗಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಆದರೆ,

ಮಾನವ ಹಕ್ಕುಗಳು ಅತೀ ಹೆಚ್ಚಾಗಿ ಉಲ್ಲಂಘನೆಯಾಗುತ್ತಿರುವ ಈ ವೇಳೆಯಲ್ಲಿ ಈ ದಿನಕ್ಕೆ ಏನೂ ಪ್ರಾಮುಖ್ಯತೆ ಎಂಬುದು ನಮಗೆ ತೋಚುವ ಪ್ರಶ್ನೆ, ಮಾನವ ಹಕ್ಕು ಹೋರಾಟ ಎಂಬುದು ಮಾಧ್ಯಮದ ಮುಂದೆ ತನ್ನ ಪ್ರತಿಷ್ಠೆಗೆ, ನಾಯಕತ್ವಕ್ಕೆ ಇರುವ ಒಂದು ವೇದಿಕೆ ಎಂದು ನಂಬಿಕೊಂಡವರು ಇದ್ದಾರೆ.
ಜಗತ್ತಿನ ಎಲ್ಲ ಮಾನವರು ಪಡೆದ ಮೂಲ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳು ಎನ್ನುವರು.
ಸಾಮಾನ್ಯವಾಗಿ ಮಾನವ ಹಕ್ಕುಗಳು ಎಂದು ಕರೆಯಲಾಗುವ ಹಕ್ಕುಗಳಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಹಾಗೂ ಸಾಮಾಜಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು,ಮಕ್ಕಳ ಹಕ್ಕುಗಳು ಮುಖ್ಯವಾಗಿವೆ.

ನಾಗರಿಕ ಹಕ್ಕುಗಳು ಕಾನೂನಿನ ಅಡಿಯಲ್ಲಿ ಸಮಾನ ರಕ್ಷಣೆ, ಸಮಾನ ಸಾಮಾಜಿಕ ಅವಕಾಶಗಳ ಖಾತರಿ, ಜನಾಂಗ, ಧರ್ಮ, ಅಥವಾ ಇತರ ವೈಯಕ್ತಿಕ ಗುಣಲಕ್ಷಣಗಳನ್ನು ಲೆಕ್ಕಿಸದೆ ಒದಗಿಸುವ ಹಕ್ಕುಗಳು. ನಾಗರಿಕ ಹಕ್ಕುಗಳು ಪ್ರಜಾಪ್ರಭುತ್ವದಲ್ಲಿ ಅತ್ಯಗತ್ಯ ಅಂಶವಾಗಿದೆ.

ಮಾನವ ಹಕ್ಕುಗಳಲ್ಲಿ ಮುಖ್ಯವಾದ ನಾಗರಿಕ ಹಕ್ಕುಗಳೇ ಇಂದು ಹೆಚ್ಚಾಗಿ ಉಲ್ಲಂಘನೆಯಾಗುತ್ತಿರುವುದು, ಜಾತಿ ಧರ್ಮದ ಹೆಸರಲ್ಲಿ ಸಾಮನ್ಯವರ್ಗ ವನ್ನು ಅಲ್ಪಸಂಖ್ಯಾತ, ದಲಿತರನ್ನು ಶೋಷಣೆಗೆ ಒಳಪಡಿಸುತ್ತಿರುವುದು ನಾವು ಕಂಡರು ಕಾಣದೇ ಹಾಗೇ ನಟಿಸುವಂತೆ ಮಾಡಿದೆ.
ಪಾಲಿಸ್ತಿನ್ – ಇಸ್ರೇಲ್ ಯುದ್ಧವು ಮಾನವ ಹಕ್ಕು ಉಲ್ಲಂಘನೆಗೆ ವಿಶ್ವದ ಮುಂದೆ ಈಗಲೂ ತೆರೆದಿಟ್ಟಿರುವ ನೈಜತೆಯ ದೊಡ್ಡ ಉದಾಹರಣೆ.
ಮಾನವ ಹಕ್ಕುಗಳ ಉಲ್ಲಂಘನೆಗೆ ಭಾರತದ ಇತ್ತೀಚಿನ ಮಣಿಪುರ ಹಿಂಸಾಚಾರ, ಯು ಪಿಯಲ್ಲಿ, ಮಹಾರಾಷ್ಟ್ರದಲ್ಲಿ ಗೋವಿನ ಹೆಸರಲ್ಲಿ ದಲಿತರ, ಮುಸ್ಲಿಂಮರ ಕೊಲೆಗಳು ಪ್ರಸಕ್ತ ಉದಾಹರಣೆಗಳು.

ಸಾಮಾಜಿಕ ಹಕ್ಕುಗಳು ಅಥವಾ ಸಮಾನತೆಯ ಹಕ್ಕುಗಳು ಕಾನೂನಿನ ಮುಂದೆ ಎಲ್ಲಾ ವ್ಯಕ್ತಿಗಳು ಸಮಾನರು, ಎಂಬುದು.
ಲಿಂಗ, ಜನಾಂಗ, ಧರ್ಮ, ಜಾತಿ, ರಾಷ್ಟ್ರೀಯ ಮೂಲ, ಅಥವಾ ಇತರ ಗುಣಲಕ್ಷಣಗಳನ್ನು ಲೆಕ್ಕಿಸದೆ, ಎಲ್ಲರಿಗೂ ಒಂದೇ ಹಕ್ಕುಗಳು, ಅವಕಾಶಗಳು.
ಭಾರತೀಯ ಸಂವಿಧಾನದ 14, 15, 16, 17 ನೇ ವಿಧಿಗಳಲ್ಲಿ ಸಮಾನತೆಯ ಹಕ್ಕು ಒದಗಿಸಲಾಗಿದೆ.

ರಾಜಕೀಯ ಹಕ್ಕುಗಳಲ್ಲಿ ಒಂದಾದ ಚುನಾವಣೆ ಅಥವಾ ಮತದಾನವು ಇಂದು ಪಾರದರ್ಶಕತೆಯನ್ನು ಕಳೆದುಕೊಂಡಿದೆ.
ವಿದ್ಯುನ್ಮಾನ ಮತದಾನ ಪ್ರಕ್ರಿಯೆಗಳು ದೊಡ್ಡ ವ್ಯತ್ಯಾಸವನ್ನು ನೀಡುವಾಗ ಚುನಾವಣೆ ಆಯೋಗವೇ ಮೌನವಹಿಸುತ್ತಿದೆ.

ನಮ್ಮ ದೈನಂದಿನ ಜೀವನದಲ್ಲಿ ಮಾನವ ಹಕ್ಕುಗಳ ಪ್ರಾಮುಖ್ಯತೆ ಮತ್ತು ಪ್ರಸ್ತುತತೆಯನ್ನು ಅಂಗೀಕರಿಸುವ ಕರೆಯಾಗಿದೆ. ದ್ವೇಷದ ಭಾಷಣದ ವಿರುದ್ಧ ಮಾತನಾಡುವ ಮೂಲಕ, ತಪ್ಪು ಮಾಹಿತಿಯನ್ನು ಸರಿಪಡಿಸುವ ಮತ್ತು ತಪ್ಪು ಮಾಹಿತಿಯನ್ನು ಎದುರಿಸುವ ಮೂಲಕ ಗ್ರಹಿಕೆಗಳನ್ನು ಬದಲಾಯಿಸಲು ನಮಗೆ ಅವಕಾಶವಿದೆ. ಮಾನವ ಹಕ್ಕುಗಳಿಗಾಗಿ ಜಾಗತಿಕ ಚಳುವಳಿಯನ್ನು ಪುನಶ್ಚೇತನಗೊಳಿಸಲು ಕ್ರಮವನ್ನು ಸಜ್ಜುಗೊಳಿಸುವ ಸಮಯವಿದು.
ಈ ಮಾನವ ಹಕ್ಕುಗಳ ದಿನದಂದು ನಾವು ಮಾನವ ಹಕ್ಕುಗಳು ಪರಿಹಾರಗಳಿಗೆ ಹೇಗೆ ಒಂದು ಮಾರ್ಗವಾಗಿದೆ ಎಂಬುದರ ಮೇಲೆ ಕೇಂದ್ರೀಕರಿಸುತ್ತೇವೆ, ಒಳ್ಳೆಯದಕ್ಕಾಗಿ ತಡೆಗಟ್ಟುವ, ರಕ್ಷಣಾತ್ಮಕ ಮತ್ತು ಪರಿವರ್ತಕ ಶಕ್ತಿಯಾಗಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಹೇಳಿದಂತೆ, “ಮಾನವ ಹಕ್ಕುಗಳು ಶಾಂತಿಯುತ, ನ್ಯಾಯಯುತ ಮತ್ತು ಅಂತರ್ಗತ ಸಮಾಜಗಳಿಗೆ ಅಡಿಪಾಯವಾಗಿದೆ.”
“ಮಾನವ ಹಕ್ಕುಗಳು ಆಕ್ರಮಣಕ್ಕೆ ಒಳಗಾಗಿವೆ, ಯಾವಾಗಲೂ ಮಾನವ ಹಕ್ಕುಗಳು ಭವಿಷ್ಯವನ್ನು ನಿರ್ಮಿಸುವ ಬಗ್ಗೆ ನಮಗೆ ನೆನಪಿಸುತ್ತದೆ – ಇದೀಗ ನಾವು ಎಲ್ಲಾ ಹಕ್ಕುಗಳಿಗಾಗಿ ನಿಲ್ಲಬೇಕು.

ಮಾನವ ಹಕ್ಕುಗಳು ವೈಯಕ್ತಿಕ ಮಾನವರು ಸಮಾಜದಲ್ಲಿ ಮತ್ತು ಪರಸ್ಪರ ಹೇಗೆ ಬದುಕುತ್ತಾರೆ, ಹಾಗೆಯೇ ರಾಜ್ಯದೊಂದಿಗೆ ಅವರ ಸಂಬಂಧ ಮತ್ತು ರಾಜ್ಯವು ಅವರ ಕಡೆಗೆ ಹೊಂದಿರುವ ಬಾಧ್ಯತೆಗಳನ್ನು ನಿಯಂತ್ರಿಸುತ್ತದೆ. ಮಾನವ ಹಕ್ಕುಗಳ ಕಾನೂನು ಕೆಲವು ಕೆಲಸಗಳನ್ನು ಮಾಡಲು ಸರ್ಕಾರಗಳನ್ನು ನಿರ್ಬಂಧಿಸುತ್ತದೆ ಮತ್ತು ಇತರರನ್ನು ಮಾಡದಂತೆ ತಡೆಯುತ್ತದೆ.

‘ಮಾನವ ಹಕ್ಕುಗಳು ಅಪಾಯದಲ್ಲಿರುವ ಈ ಸಮಯದಲ್ಲಿ ಅದರ ಬಗ್ಗೆ ನೆನಪಿಸಲು, ಮತ್ತೊಮ್ಮೆ ನಮ್ಮ ಮುಂದೆ ಬಂದ ‘ವಿಶ್ವ ಮಾನವ ದಿನ’ ಇಂದಿನ ಚರ್ಚೆಗಳಲ್ಲಿ ಮುಗಿಸದೆ, ನಮ್ಮ ಹಕ್ಕುಗಳಿಗಾಗಿ ಕಾನೂನಿನ ಶಕ್ತಿಯೊಂದಿಗೆ, ಸಂವಿಧಾನದ ವಿಧಿಯೊಂದಿಗೆ ನ್ಯಾಯಕ್ಕಾಗಿ ಜೊತೆಗೂಡುವ’

-ವಿಶ್ವ ಮಾನವ ಹಕ್ಕುಗಳ ದಿನದ ಶುಭಾಶಯಗಳು-

✍️ ಫಾರೂಕ್ ಕಾನಕ್ಕೋಡ್

Leave a Reply

Your email address will not be published. Required fields are marked *