ಸಾಮಾಜಿಕ, ರಾಜಕೀಯ, ಸಹಕಾರಿ, ಶೈಕ್ಷಣಿಕ ಧಾರ್ಮಿಕ ಕ್ಷೇತ್ರದಲ್ಲಿ ಕಳೆದ 35 ವರ್ಷಗಳಿಂದ ತೊಡಗಿಸಿಕೊಂಡಿರುವ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಯಾಗಿ ನೇಮಕಗೊಂಡ, ಭಾರತ ಸರಕಾರ ದ ನಾರು ಮಂಡಳಿ ಸದಸ್ಯರಾಗಿ, ಕರ್ನಾಟಕ ಸರಕಾರದ ಕೆಎಫ್ ಡಿಸಿ, ಕೆಎಂಡಿಸಿ, ವಕ್ಫ್ ಕೌನ್ಸಿಲ್ ರಾಜ್ಯ ಸದಸ್ಯರಾಗಿ ಈ ಹಿಂದೆ ಸೇವೆ ಸಲ್ಲಿಸಿರುವ,ಕರ್ನಾಟಕ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಯುವ ಪ್ರಶಸ್ತಿ ಗೆ ಭಾಜನರಾದ, ದೇಶ, ವಿದೇಶ ಗಳಲ್ಲಿ ಹಲವಾರು ಪ್ರಶಸ್ತಿ ಪಡೆದ ಟಿ. ಎಂ. ಶಹೀದ್ ತೆಕ್ಕಿಲ್ ರವರನ್ನು ಸುಳ್ಯದಲ್ಲಿ ಸಾರ್ವಜನಿಕ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು
ಈ ಸಂದರ್ಭದಲ್ಲಿ ಪೋಸ್ಟಲ್ ಡಿಪಾರ್ಟ್ಮೆಂಟ್ ನವರು ವಿಶೇಷ ಸಂದರ್ಭದಲ್ಲಿ ಅಂಚೆ ಚೀಟಿ “ಮೈ ಸ್ಟ್ಯಾಂಪ್ ” ನೀಡಲಾಗುತ್ತಿದ್ದು
ದ. ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ (ಮೀಫ್ ) ಉಪಾಧ್ಯಕ್ಷ ಕೆ. ಎಂ. ಮುಸ್ತಫ ಅಂಚೆ ಚೀಟಿ ಯನ್ನು ಕೊಡುಗೆ ನೀಡಿದರು
ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಮಾಜಿ ಸಚಿವರಾದ ಬಿ. ರಮಾನಾಥ್ ರೈ, ಮಾಜಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು