ಗಾಂಧಿನಗರದ ಪಿ.ಎ ಆರ್ಕೆಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ SSLC ವಿದ್ಯಾರ್ಥಿಗಳ ಶೈಕ್ಷಣಿಕ ತರಬೇತಿ ಕೇಂದ್ರ nLight Academy ಇದರ ಪೂರ್ವ ವಿದ್ಯಾರ್ಥಿಗಳ ಸಭೆಯು ಡಿಸೆಂಬರ್ 23 ರಂದು ಸಂಸ್ಥೆಯ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪ್ರೇರಣೆಯ ಮಾತುಗಳನ್ನಾಡಿದ ಈ-ವಾರ್ತೆ.ಇನ್ ಮುಖ್ಯಸ್ಥರಾದ ರಶೀದ್ ಜಟ್ಟಿಪಳ್ಳರವರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಮನಮುಟ್ಟುವ ರೀತಿಯಲ್ಲಿ ವಿವರಿಸಿದರು.
ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶಬಾಬ್, ಪ್ರ.ಕಾರ್ಯದರ್ಶಿಯಾಗಿ ಅಂಶಿಫ್ ಕುಂಬ್ಳೆಕಾರ್ಸ್, ಕೋಶಾಧಿಕಾರಿಯಾಗಿ ಶಾನ್ ಕಟ್ಟೆಕಾರ್, ಉಪಾಧ್ಯಕ್ಷರುಗಳಾಗಿ ಶಿಝಾನ್ ಅಹ್ಮದ್ ಹಾಗೂ ಜಾಝಿನ್, ಜೊತೆ ಕಾರ್ಯದರ್ಶಿಗಳಾಗಿ ಶಿಫಾನ್ ಜೆ.ಎಸ್ ಹಾಗೂ ಅನ್ಸಾಫ್ ಅರಂತೋಡು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಮಾನ್, ಸಿಯಾಬ್, ತಮೀಮ್, ಶಹೀಂ, ಸಿನಾನ್, ರಹೀಸ್, ಹಫೀಜ್, ಕರ್ರಾರ್, ಫಕ್ರುದ್ದೀನ್, ರಿಯಾನ್ ರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ nLight ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಮುಜೀಬ್ ಕೆ.ಬಿ, ಆಶಿಕ್ ಸುಳ್ಯ, ಮಶೂದ್ ಮಚ್ಚು, ರವೂಫ್ RBA ಹಾಗೂ ಪೂರ್ವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮನ್ನು ನಿಸಾರ್ ಶೈನ್ ನಿರೂಪಿಸಿದರು.