ಸುಳ್ಯ: ಸುಳ್ಯದ ಶಾಂತಿನಗರದ ನಿವಾಸಿಗಳಿಗೆ ಸರಿಯಾದ ರಸ್ತೆ ಎಂಬುವುದ ಕನಸಿನ ಮಾತಷ್ಟೆ,ಹಾಗೆ ಈ ವಿಷಯ ಇಂದು ನಿನ್ನೆಯದಲ್ಲ, ಅನೇಕ ವರ್ಷಗಳ ಈ ಊರವರ ಹಣೆಬರಹ ಅನ್ನಬೇಕಷ್ಟೆ.?
ಹೌದು ಸುಳ್ಯ ನಗರದ ಪ್ರಮುಖ ವಾರ್ಡ್ ಗಳಲ್ಲಿ ಒಂದಾಗಿರುವ ಶಾಂತಿನಗರ ಎಂಬಲ್ಲಿ ನಿತ್ಯವೂ ಮುಗಿಯದ ಸಮಸ್ಯೆ, ಒಂದು ದಿನ ನಾಯಿಗಳ ಉಪಟಳವಿದ್ದರೆ, ಮತ್ತೊಂದು ದಿನ ನೀರಿನ ಸಮಸ್ಯೆ, ಮತ್ತೊಂದು ದಿನ ಇನ್ನೊಂದು ಮಗದೊಂದು ಸಮಸ್ಯೆ ಇದಕ್ಕೆಲ್ಲ ಮುಖ್ಯ ಕಾರಣ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿ ತನ ಅಷ್ಟೇ..!! ಇದೀಗ ರಾಷ್ಟ್ರೀಯ ಹೆದ್ದಾರಿಯಿಂದ ಶಾಂತಿನಗರ ತಿರುವಿಗೆ ಇರುವ ರಸ್ತೆಯೇ ಒಂದು ಅವೈಜ್ಞಾನಿಕ ತರಹ ಇದೆ.
ಅದರಲ್ಲೂ ಹಲವು ಬಗೆಯ ಯೋಜನೆಗಳಿಂದಾಗಿ ರಸ್ತೆಯನ್ನು ಜೆಸಿಬಿ ಮೂಲಕ ಅಗೆದು ವಿಳಾಸ ಇಲ್ಲಂದಂತೆ ಮಾಡಿದ್ದಾರೆ. ಕಾರು ಟ್ರಯಲ್ ನೋಡೊದಕ್ಕೆ ಇದುವೆ ಬೆಸ್ಟ್ ರೋಡ್ ಅಂತ ಶೋರೂಮ್ ನವರೂ ಹೆಚ್ಚಾಗಿ ಈ ರಸ್ತೆಯನ್ನೇ ಉಪಯೋಗಿಸುತ್ತಿದ್ದಾರೆ, ಅಷ್ಟು ಕೆಟ್ಟಾದಾಗಿ ಹೋಗಿದೆ ರಸ್ತೆ. ಹಲವು ಬಾರಿ ವಿವಿಧ ರೀತಿಯಲ್ಲಿ ಇದನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಈ ಸಮಸ್ಯೆ ಸೂಚಿಸಿದರೂ ‘ಡೊಂಟ್ ಕೇರ್’ ಅನ್ನುತ್ತಿದ್ದಾರೆ. ಇದನ್ನೆಲ್ಲಾ ಕಂಡು ಸುಸ್ತಾದ ಊರವರು ತಮ್ಮ ಸ್ವಂತ ಕೈಯಿಂದ ಖರ್ಚು ಬರಿಸಿ ಮಧ್ಯ ರಾತ್ರಿಯಲ್ಲಿ ರಸ್ತೆಯನ್ನು ಕಾಂಗ್ರೀಟ್ ಮಾಡಿದ್ದಾರೆ. ಈ ಮೂಲಕ ತೆರಿಗೆ ಕಟ್ಟಿದವರ ಶಾಪ ಜನಪ್ರತಿನಿಧಿಗಳಿಗೆ ತಟ್ಟದಿರಲಿ ಎಂಬ ಉದ್ದೇಶದಿಂದ ಊರಿನ ಕೆಲ ಯುವಕರು ಈ ಕೆಲಸ ಕೈಗೊಂಡಿದ್ದಾರೆ. ಪೈಪ್ ಲೈನ್ ಗಾಗಿ ಬಾವಿ ತರಹ ತೋಡಿದ್ದ ಹುಂಡಿಯನ್ನು ಮುಚ್ಚಿ ತಮ್ಮ ಕೈಯಲ್ಲಾಗುವ ಅಳಿಲು ಸೇವೆಯನ್ನು ಮಾಡಿದ್ದಾರೆ.