ಪೆರಾಜೆ: ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಪೆರಾಜೆ ಸಮೀಪ ಕಲ್ಚೆರ್ಪೆಯಲ್ಲಿ ಬೈಕ್ ಹಾಗೂ ಕಾರು ನಡುವೆ ಅಫಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯ ಗೊಂಡ ಘಟನೆ ವರದಿಯಾಗಿದೆ, ಗಾಯಗೊಂಡಾತ ಮಂಗಳೂರು ಸಮೀಪದ ಕುತ್ತಾರು ನಿವಾಸಿ ಪ್ರಜ್ವಲ್ ಎಂದು ತಿಳಿದು ಬಂದಿದೆ. ಸುಳ್ಯ ದಿಂದ ಅರಂತೋಡು ಕಡೆಗೆ ಹೋಗುತ್ತಿದ್ದ ಜಾವೆದ್ ತೆಕ್ಕಿಲ್ ಕಾರಿಗೆ ಮಡಿಕೇರಿ ಕಡೆಯಿಂದ ಬಂದ ಬೈಕ್ ಸವಾರ ಡಿಕ್ಕಿಯಾಗಿ ರಸ್ತೆಗೆ ಉರುಳಿ ಬಿದ್ದು ಗಂಭೀರ ಗಾಯಗೊಂಡು , ಆಸ್ಪತ್ರಗೆ ದಾಖಲು ಮಾಡಲಾಗಿದೆ, ಗಾಯಗೊಂಡವರನ್ನು ಪೆರಾಜೆ ತವೀದ್ ಆಸ್ಪತ್ರಗೆ ದಾಖಲು ಮಾಡಿದ್ದಾರೆ. ಕಾರಿನಲ್ಲಿದ್ದವರೂ ಅಲ್ಪ ಪ್ರಮಾಣದ ಗಾಯಗೊಂಡಿದ್ದಾರೆ.


