ಸಂಪಾಜೆ :ಗೂನಡ್ಕ ಪೇರಡ್ಕ ಮೊಹಿಯದ್ದಿನ್ ಜುಮಾ ಮಸೀದಿ ವಠಾರದಲ್ಲಿ ಭಾರತದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಜಮಾಅತ್ ಸಮಿತಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು. ಪೇರಡ್ಕ ಮಸೀದಿ ಖತೀಬರಾದ ಅಹ್ಮದ್ ನ‌ಈಂ ಫೈಝಿ ಅಲ್ ಮ‌ಅಬರಿ ಮುಖ್ಯ ಭಾಷಣ ನಡೆಸಿ ಗಣರಜ್ಯೋತ್ಸವದ ಮಹತ್ವದ ಬಗ್ಗೆ, ದೇಶ ಪ್ರೇಮದ ದೇಶದೊಂದಿಗೆ ಮುಸ್ಲಿಂ ಸಮುದಾಯದ ಸೇವೆಯಬಗ್ಗೆ ತಿಳಿಸಿ ಸಮುದಾಯ ದೇಶಕ್ಕಾಗಿ ಹೆಚ್ಚು ಕ್ರಿಯಾಶೀಲರಾಗಿ ದುಡಿಯುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿ ದೇಶದ ಒಳಿತಿಗೆ ಪ್ರಾರ್ಥಿಸಿದರು,ಜಮಾಅತ್ ಸಮಿತಿ ಕಾರ್ಯದರ್ಶಿ ಉಸ್ಮಾನ್ ಕೆ ಎಂ ಮತ್ತು ಸಹ ಅಧ್ಯಾಪಕರಾದ ಹಾರಿಸ್ ಕಾಮಿಲ್ ಅಝ್ಹರಿ ಶುಭ ಹಾರೈಸಿ ಮಾತನಾಡಿದರು,ತೆಕ್ಕಿಲ್ ಮೊಹಮದ್ ಹಾಜಿ ಮೆಮೋರಿಯಲ್ ತಕ
ಕ್ವಿಯತುಲ್ ಇಸ್ಲಾಂ ಮತ್ತು ಹಯಾತುಲ್ ಇಸ್ಲಾಂ ಮದ್ರಸ ಗೂನಡ್ಕ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಮಸೀದಿ ಪ್ರಧಾನ ಕಾರ್ಯದರ್ಶಿ ಪಿ.ಕೆ ಉಮರ್ ಗೂನಡ್ಕ, ಉಪಾಧ್ಯಕ್ಷ ಹನೀಫ್ ಟಿ.ಬಿ, ಕೋಶಾಧಿಕಾರಿ ಮುಹಮ್ಮದ್ ಕುಂಞಿ ತೆಕ್ಕಿಲ್, ಎಸ್.ಕೆ.ಎಸ್.ಎಸ್.ಎಫ್ ಗೂನಡ್ಕ ಶಾಖೆಯ ಅಧ್ಯಕ್ಷ ಮುನೀರ್ ದಾರಿಮಿ ಗೂನಡ್ಕ, ಸಹ ಅಧ್ಯಾಪಕರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಲ್ಲುಗುಂಡಿ, ಎಸ್.ಕೆ.ಎಸ್.ಎಸ್.ಎಫ್ ಕಾರ್ಯಕರ್ತರಾದ ಸಾದುಮಾನ್ ತೆಕ್ಕಿಲ್, ಶಾಹಿಲ್ ದರ್ಖಾಸ್ ಮತ್ತು ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂ.ಆರ್.ಡಿ.ಎ ಅಧ್ಯಕ್ಷರಾದ ಜಿ.ಕೆ ಹಮೀದ್ ಗೂನಡ್ಕ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿ ವಂದಿಸಿದರು.ಸಿಹಿ ತಿಂಡಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ಎಸ್ ಕೆ ಎಸ್ ಎಸ್ ಎಫ್ ಮಾನವ ಸರಪಳಿ 2025 ರ ವಿಶೇಷ ಡೈರಿಯನ್ನು ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಅಹಮದ್ ನಹೀಂ ಫೈಜಿ ಅಲ್ ಮಅಬರಿ ಮತ್ತು ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆಯ ಅಧ್ಯಕ್ಷರಾದ ಮುನೀರ್ ದಾರಿಮಿ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *