ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಸುಳ್ಯ ನಾನು ಬಾಲ್ಯದಲ್ಲಿ ಕಲಿತ ಶಾಲೆಯಲ್ಲಿ ನನ್ನ ಬಾಲ್ಯದ ಸಹಪಾಠಿಗಳೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಆನಂದಿಸಿದ ಆ ಒಂದು ನೆನಪುಗಳನ್ನು ಇಲ್ಲಿ ಹಂಚುತ್ತಿದ್ದೇನೆ.
ಈ ಕಾರ್ಯಕ್ರಮವು ನಡೆಯಲು ಕಾರಣ ನಮ್ಮ ಸ್ನೇಹಿತ ಬಳಗದವರ ಪರಿಶ್ರಮ ನಾವು ಕಲಿತ ಶಾಲೆಯಲ್ಲಿ ಹಾಗೂ ನಮ್ಮೊಂದಿಗೆ 2004ನೇ ಸಾಲಿನಲ್ಲಿ ಕಲಿತಂತಹ ನಮ್ಮ ಸ್ನೇಹಿತ ಬಳಗದವರಲ್ಲಿ ಸ್ವಲ್ಪ ಜನರ ಮನಸ್ಸಿನಲ್ಲಿ ಮೂಡಿಬಂದಂತಹ ಆ ಬಾಲ್ಯದ ನೆನಪುಗಳನ್ನು ಮರುಕಳಿಸಲು ಒಟ್ಟಾಗಿ ಸೇರಿಸಲು ಕಾರ್ಯಕ್ರಮವನ್ನು ಮಾಡಲಾಯಿತು. ಇದರಲ್ಲಿ ಮೊದಲನೆಯದಾಗಿ ಪಾತ್ರವನ್ನು ವಹಿಸಿದವರು ನಮ್ಮ ಆತ್ಮೀಯ ಸ್ನೇಹಿತರಾದ ಮಜೀದ್ , ನೌಶಾದ್, ಸರ್ಪುದ್ದೀನ್, ಮಶೂದ್, ಸಿದ್ದೀಕ್, ಇಷ್ಟು ಜನರ ದಿನನಿತ್ಯ ಪ್ರಯತ್ನ ಮಾಡಿ ವಾಟ್ಸಪ್ ಗ್ರೂಪುಗಳನ್ನು ರಚಿಸಿಕೊಂಡು. ನಮ್ಮ ಬಾಲ್ಯದಲ್ಲಿ ನಮ್ಮ ಶಾಲೆಯ ಆವರಣದಲ್ಲಿ ಅಧ್ಯಾಪಕರು ಹಾಗೂ, ವಿದ್ಯಾರ್ಥಿಗಳು ಸೇರಿ 2004 ನೇ ಸಾಲಿನಲ್ಲಿ ತೆಗಿಸಿದಂತಹ ಭಾವಚಿತ್ರವನ್ನು, ಮುಂದಿಟ್ಟುಕೊಂಡು ಈ ಕಾರ್ಯಕ್ರಮವು ಮೊದಲನೆಯದಾಗಿ ಪ್ರಾರಂಭಿಸಿದೆವು. ಹಾಗೂ ವಾಟ್ಸಪ್ ಗ್ರೂಪ್ ಗಳ ಮೂಲಕ ಉಳಿದ ಸ್ನೇಹಿತರನ್ನು ಸೇರಿಸಿಕೊಂಡು ಬಾಲ್ಯದ ನೆನಪುಗಳನ್ನು ಪುನಹ ಮರುಕಳಿಸುವ ಉದ್ದೇಶವನ್ನು ಮುಂದಿಟ್ಟುಕೊಂಡು ಸ್ನೇಹಿತರೊಂದಿಗೆ ಹಂಚಿದೆವು. ಅದರ ಸಲುವಾಗಿ ಎಲ್ಲರೂ ಸಹಕಾರವನ್ನು ನೀಡಿದರು.
ಅದೇ ರೀತಿಯಲ್ಲಿ ನಮ್ಮೊಂದಿಗೆ ಕಲಿತಂತಹ ಸಹಪಾಠಿಗಳಾದಂತಹ ಮಹಿಳೆಯರಿಗೂ ಈ ಸಂದೇಶವನ್ನು ರವಾನಿಸಿದೆವು.
ಅದೇ ರೀತಿಯಲ್ಲಿ, ಮಹಿಳೆಯರಲ್ಲಿಯೂ ಈ ಕಾರ್ಯಕ್ರಮಕ್ಕೆ ಮುಂಚೂಣಿಯಲ್ಲಿ, ತಸ್ಮಿಯ, ನೆಸೀರ, ಹಾಗೂ ರಂಸೀನಾ ವಾಟ್ಸಾಪ್ ಗ್ರೂಪುಗಳನ್ನು ರಚಿಸಿಕೊಂಡು ತಮ್ಮ ಸ್ನೇಹಿತೆಯರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡು ಉತ್ತಮ ರೀತಿಯಾದ ಸಂದೇಶಗಳನ್ನು ರವಾನಿಸುವ ಮೂಲಕ ಎಲ್ಲರ ಸಹಕಾರವನ್ನು ಪಡೆದರು. ಹಾಗೂ, ನಾವು , ನಮ್ಮ ಸ್ನೇಹಿತೆಯರೊಂದಿಗೆ ಒಂದುಗೂಡಿ, ನಮಗೆ ಬಾಲ್ಯದಲ್ಲಿ ಪಾಠ ಕಲಿಸಿದಂತಹ ಅಧ್ಯಾಪಕರುಗಳನ್ನು ಈ ಕಾರ್ಯಕ್ರಮಕ್ಕೆ ಅವರೊಂದಿಗೆ ಆ ದಿನದಲ್ಲಿ ಬೆರೆಯಲು ಹಾಗೂ ಸಂತೋಷವನ್ನು ಆನಂದಿಸುವ ಸಲುವಾಗಿ ಅವರನ್ನು ನಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅಧ್ಯಾಪಕರುಗಳ ದೂರವಾಣಿ ಸಂಪರ್ಕವನ್ನು ಪಡೆದುಕೊಂಡು ಅವರೊಂದಿಗೆ ಸ್ನೇಹ ಸಮ್ಮಿಲನದ ಆ ಒಂದು ಕ್ಷಣಕ್ಕೆ ಬರಮಾಡಿಕೊಳ್ಳಲು ಅವರ ಮನೆಗೆ ಭೇಟಿ ನೀಡಿ ಕೇಳಿಕೊಂಡು ನಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಇದರಿಂದಾಗಿ ಅಧ್ಯಾಪಕರುಗಳು, ತುಂಬಾ ಸಂತೋಷವನ್ನು ನಮ್ಮೊಂದಿಗೆ ವ್ಯಕ್ತಪಡಿಸಿದರು.
ಅದೇ ರೀತಿಯಲ್ಲಿ ಎಲ್ಲರೂ ಕೂಡ ನಾವು ನಿಗದಿ ಪಡಿಸಿದ ದಿನಾಂಕಕ್ಕೆ ಎಲ್ಲರೂ ಹಾಜರಾಗಿದ್ದು ಅದೇ ರೀತಿಯಲ್ಲಿ ಅಧ್ಯಾಪಕರುಗಳು, ಮಾತನಾಡಿ ಅವರಿಗೆ ಸಂತೋಷದಿಂದ ಪದಗಳೇ ಬರದೆ ಭಾವುಕರಾದರು. ನಮ್ಮ ಜೀವನಕ್ಕೆ ಬೇಕಾದಂತಹ ಉತ್ತಮ ಸಂದೇಶಗಳನ್ನು ಹಾಗೂ ಮಾರ್ಗದರ್ಶನಗಳನ್ನು ನೀಡಿದರು. ಅದೇ ರೀತಿಯಲ್ಲಿ ನಾವೆಲ್ಲಾ ಸಹಪಾಠಿಗಳು ಸೇರಿಕೊಂಡು ನಮ್ಮ ಎಲ್ಲಾ ಅಧ್ಯಾಪಕರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಿ ಗೌರವಾರ್ಪಣೆ ಮಾಡಿದೆವು. ಅದರಿಂದ, ಅಧ್ಯಾಪಕರುಗಳು, ತಮ್ಮದೇ ಆದ ರೀತಿಯಲ್ಲಿ ಸಂತೋಷವನ್ನು ವ್ಯಕ್ತಪಡಿಸಿದರು.
ಹಾಗೂ ಅದರ ನಂತರ ಎಲ್ಲಾ ಸಹಪಾಠಿಗಳು ತಮ್ಮ ತಮ್ಮ ಸಂತೋಷವನ್ನು ಹಂಚಿದರು. ಹಾಗೂ ನಮ್ಮಲ್ಲಿ ಕಲಿತ ಶಾಹಿನ ಹಾಗೂ ಮಿಶ್ರಿಯ, ಸರಕಾರಿ ಹುದ್ದೆಯನ್ನು ಹೊಂದಿದವರಾಗಿದ್ದು ಅವರಿಗೂ ಕೂಡ ಅದೇ ಸಂದರ್ಭದಲ್ಲಿ ಶಾಲು ಓದಿಸಿ ಸನ್ಮಾನವನ್ನು ಮಾಡಿ ಗೌರವಿಸಿದೆವು. ಅದರ ನಂತರ ಉತ್ತಮವಾದ ಭೋಜನ ವ್ಯವಸ್ಥೆಯು ಮಾಡಿದೆವು. ಹಾಗೂ ಎಲ್ಲರೂ ಹೊಟ್ಟೆ ತುಂಬಾ ಊಟಗಳನ್ನು ಮಾಡಿದ ನಂತರ ಮುಂದಿನ ಕಾರ್ಯಕ್ರಮವನ್ನು ಇಟ್ಟುಕೊಂಡೆವು.
ಅದು ನಮ್ಮ ಕೊನೆಯ ಕಾರ್ಯಕ್ರಮದ ಅಂಗವಾಗಿ, ಮನರಂಜನೆ ಕಾರ್ಯಕ್ರಮವಾಗಿ ಕ್ರೀಡೆಯನ್ನು ಮಾಡಿ ಅದರ ನಂತರ ವಿಜೇತರಿಗೆ, ಬಹುಮಾನವನ್ನು ನೀಡಿ ಗೌರವಿಸಿದೆವು ಅದರ ನಂತರ ಕಾರ್ಯಕ್ರಮವನ್ನು ಮುಗಿಸಿ ಎಲ್ಲರೂ ಸಂತೋಷದಿಂದ ತೆರಳಿದರು.
ಎಂದೆಂದಿಗೂ ಮರೆಯಲಾಗದ ನೆನಪುಗಳೇ ಬಾಲ್ಯದ ಸವಿ ನೆನಪುಗಳು ಎಂದು ಹೇಳುತ್ತಾ ನನ್ನ ಈ ಬರಹವನ್ನು ಕೊನೆಗೊಳಿಸುತ್ತಿದ್ದೇನೆ.
ರಿಯಾಝ್ ಕಾರ್ಲೆ