ಸುಳ್ಯ: ಬೆಳೆಯುತ್ತಿರುವ ಸುಳ್ಯಕ್ಕೆ ಮತ್ತೊಂದು ಗರಿ ಎಂಬಂತೆ, ಹೊಸ ಮನೆ ಅಥವಾ ಕಛೇರಿ, ಮಳಿಗೆಗಳ ಅಂದವನ್ನು ಹೆಚ್ಚಿಸಲು, ಸುಳ್ಯದ ಹಳೆಗೇಟು ಎಂಬಲ್ಲಿ ತಲೆ ಎತ್ತಿ ನಿಂತಿದೆ ಹಿಂದೂಸ್ತಾನ್ ಕರ್ಟೈನ್ಸ್ & ಡೋರ್ಸ್ ಗಳ ಹೊಸ ಮಳಿಗೆ. ಝುಬೈರ್ ಮೆನ್ಝ್ ಪಾರ್ಕ್ ಹಾಗೂ ಸೆಮೀರ್ ನಭವಿ ಮಾಲಕತ್ವದ ಹಿಂದೂಸ್ತಾನ್ ಕರ್ಟೈನ್ಸ್ & ಡೋರ್ಸ್ ಮಳಿಗೆಯು ಸೆಪ್ಟೆಂಬರ್11, 2023 ರಂದು ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ಶ್ರೀ ಜಿ ಇಬ್ರಾಹಿಂ ಹಾಜಿ ( ಅಧ್ಯಕ್ಷರು ಎಂ.ಜೆ.ಎಂ ಮೊಗರ್ಪಣೆ) ನಿರ್ವಹಿಸಿದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಿ.ಬಿ ಸುಧಾಕರ ರೈ (ಅಧ್ಯಕ್ಷರು ವರ್ತಕರ ಸಂಘ) ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ವೆಂಕಪ್ಪ ಗೌಡ (ನಗರ ಪಂಚಾಯತ್ ಸುಳ್ಯ), ಶ್ರೀ ಮುಜೀಬ್ ಪೈಚಾರ್ (ಸದಸ್ಯರು ಗ್ರಾಮ ಪಂಚಾಯತ್ ಜಾಲ್ಸೂರು), ಶ್ರೀ ಐಕೆ ಮಹಮ್ಮದ್ ಇಕ್ಬಾಲ್ ಎಲಿಮಲೆ (ಅಧ್ಯಕ್ಷ ಅ.ಸ.ದೊ.ಪ್ರ.ವಿ ಸಹಕಾರಿ ಸಂಘ, ಶ್ರೀ ಎಂ.ಬಿ ಸದಾಶಿವ, (ಅಧ್ಯಕ್ಷ ಎಂ.ಬಿ ಫೌಂಡೇಶನ್), ಶ್ರೀ ಎನ್.ಎ ರಾಮಚಂದ್ರ ( ಮಾಜಿ ನಗರ ಪಂಚಾಯತ್), ಶ್ರೀ ಮುಸ್ತಫಾ ಜನತಾ (ಮಾಜಿ ನಗರ ಪಂಚಾಯತ್ ಸದಸ್ಯರು), ಶ್ರೀ ಕೆ ಶಿವನಾಥ ರಾವ್ (ಮಾಜಿ ನಗರ ಪಂಚಾಯತ್ ಸದಸ್ಯರು), ಶ್ರೀ ನಝೀರ್ ಶಾಂತಿನಗರ ( ಅಧ್ಯಕ್ಷ ಎಸ್.ಡಿ.ಎಂ.ಸಿ ಶಾಂತಿನಗರ), ಶ್ರೀ ಬಶೀರ್ ಆರ್.ಬಿ( ಅಧ್ಯಕ್ಷರು ಕಾರುಣ್ಯ ಚಾರಿಟೇಬಲ್ ಟ್ರಸ್ಟ್, ಶ್ರೀ ಸೈಯ್ಯದ್ ಆಲಿ ಕೆ.ಪಿ ( ಮಾಲಿಕರು ಮೆನ್ಝ್ ಪಾರ್ಕ್), ಶ್ರೀ ಮಹಮ್ಮದ್ ಕೆ.ಎಚ್ ( ಮಾಲಕರು ಕೆ.ಎಚ್ ಕಾಂಪ್ಲೆಕ್ಸ್ ಹಳೆಗೇಟು) ಆಗಮಿಸಿ ಶುಭ ಹಾರೈಸಿದರು.

ತಮ್ಮ ಈ ಮಳಿಗೆಯಲ್ಲಿ ಎಲ್ಲಾ ವಿಧದ ಕರ್ಟೈನ್ಸ್, ಡೋರ್ಸ್ ಗಳು ಹೋಲ್ ಸೇಲ್ ಹಾಗೂ ರಿಟೇಲ್ ದರದಲ್ಲಿ ದೊರೆಯುತ್ತವೆ ಎಂದು ಸಂಸ್ಥೆಯ ಮಾಲಕರು ತಿಳಿಸಿದರು.