Paichar: ಅರ್ತಾಜೆ ಫ್ರೆಂಡ್ಸ್ ಕ್ಲಬ್ ಪೈಚಾರ್ ಆಶ್ರಯದಲ್ಲಿ ಸ್ಥಳೀಯರ ಪ್ರೋ ಲೀಗ್ ಮಾದರಿಯ ಹೊನಲು ಬೆಳಕಿನ ‘ಎ.ಎಫ್.ಸಿ ಟ್ರೋಫಿ 2025’ ಕಬಡ್ಡಿ ಪಂದ್ಯಾಟ ದಿನಾಂಕ ಫೆ.8 ರಂದು ಬೊಳುಬೈಲಿನ ಕುರುಂಜಿ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಕೂಟದ ಚಾಂಪಿಯನ್ ಪಟ್ಟವನ್ನು ರಿಫಾಯಿ ಮಾಲೀಕತ್ವದ ಅಸ್ತ್ರ ಟ್ರಾನ್ಸ್‌ಪೋರ್ಟ್ ಪಡೆದುಕೊಂಡರೆ, ರನ್ನರ್ ಅಪ್ ಪ್ರಶಸ್ತಿಯನ್ನು ರಫೀಕ್ ಬಿ.ಎಸ್ ಮಾಲೀಕತ್ವದ ಲಾರಾ ಬುಲ್ಸ್ ಪಡೆದುಕೊಂಡಿತು. ಇನ್ನು ವೈಯುಕ್ತಿಕ ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಲತೀಫ್ ಟಿ.ಎ, ಉತ್ತಮ ದಾಲಿಗಾರ ಪ್ರಶಸ್ತಿಯನ್ನು ನಝೀರ್ ಶಾಂತಿನಗರ, ಉತ್ತಮ ಸರ್ವಾಂಗೀಣ ಆಟಗಾರನಾಗಿ ಅಝೀಝ್ ಬಿ.ಎಸ್ ಪಡೆದುಕೊಂಡರು. ಬೇಬಿ ಸೋನಾ ಅಡ್ಕಾರು, (ರಾಷ್ಟಮಟ್ಟದ SGFI ಯೋಗ ಯೋಗ ಸ್ಪರ್ಧೆಯ ಪ್ರಶಸ್ತಿ ಪುರಸ್ಕೃತೆ), ಸತ್ಯ ಶಾಂತಿ ತ್ಯಾಗ ಮೂರ್ತಿ (ಹೋರಾಟಗಾರರು, ಸಮಾಜ ಸೇವಕ) ಇವರಿಗೆ ಸನ್ಮಾನ ನೀಡಿ ಗೌರವಿಸಲಾಯಿತು.
