ಇಂಡಿಯಾ ಒಕ್ಕೂಟದ ರಾಷ್ಟ್ರೀಯ ನಾಯಕ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಹೊಣೆಗಾರಿಕೆಯಲ್ಲಿ ಲೋಕಸಭಾ ವಿಪಕ್ಷ ನಾಯಕರಾಗಿ ಕೇಂದ್ರ ಸಚಿವರ ಅಧಿಕಾರವನ್ನೇ ಹೊಂದಿರುವ ( ಬ್ರಿಟನ್ ದೇಶಲ್ಲಾದರೆ ಶೇಡೋ ಪ್ರಧಾನಿ ಎಂದು ಪರಿಗಣಿಸಲ್ಪಡುವ) ರಾಹುಲ್ ಗಾಂಧಿ ಅವರ ಬಗ್ಗೆ ಒಬ್ಬ ಜನಪ್ರತಿನಿಧಿಯಾಗಿ ಭರತ್ ಶೆಟ್ಟಿ ಅವರ ತೀರ ಕಳಪೆಯ, ಹಿಂಸಾತ್ಮಕ ಮಾತು, ಖಂಡನೀಯ ಮಾತ್ರವಲ್ಲದೇ ಆಡಳಿತ ಸೂಕ್ತ ಅಪರಾಧಿ ಪ್ರಕರಣದ ಕಾನೂನು ಕ್ರಮ ಕೈಗೊಳ್ಳಬೇಕಿದೆ.
ದೇಶದ 24 ಲಕ್ಷ ವಿದ್ಯಾರ್ಥಿಗಳ ನೀಟ್ ಪೇಪರ್ ಲೀಕ್ ಹಗರಣ ವಿಷಯದಲ್ಲಿ ಸಂಸತ್ತಿನಲ್ಲಿ ನ್ಯಾಯದ ಧ್ವನಿ, ಮಣಿಪುರ ಗಲಭೆ ಸಂತ್ರಸ್ತರ ನಿರಾಶ್ರಿತರ ಭೇಟಿ, ಉತ್ತರ ಪ್ರದೇಶದಲ್ಲಿ ಸತ್ಸಂಗದಲ್ಲಿ ಕಾಲ್ತುಳಿತದಲ್ಲಿ ಮಡಿದ ಪೀಡಿತರ ಭೇಟಿ, ಅಗ್ನಿ ವೀರ್ ಶಹೀದ್ ಕುಟುಂಬಕ್ಕೆ ನ್ಯಾಯ, ರೈತರಿಗೆ ಕನಿಷ್ಟ ಬೆಂಬಲ ಬೆಲೆ ಒತ್ತಾಯ, ನಿರುದ್ಯೋಗ ಸಮಸ್ಯೆಗೆ ಯುವ ಸಮಾಜದ ಪರವಾಗಿ ಧ್ವನಿ, ಅಲ್ಪಸಂಖ್ಯಾತರ ವಿರುದ್ಧ ಆಡಳಿತ ಮಲತಾಯಿ ಧೋರಣೆಗೆ ಇಂಡಿಯಾ ಒಕ್ಕೂಟದ ನಾಯಕತ್ವ ವಹಿಸಿ ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ದ ವಿಪಕ್ಷಗಳ ನಾಯಕ ರಾಹುಲ್ ಗಾಂಧಿ ಸ್ಪಂದಿಸುತ್ತಿರುವ ಕ್ರಮದಿಂದ ಕಂಗಲಾಗಿರುವ ಬಿಜೆಪಿಗರು ಹತಾಶೆಯಿಂದ ಅನೀತಿಯ ಹೇಳಿಕೆ, ಅಪಪ್ರಚಾರ ನಡೆಸುತ್ತಿದ್ದಾರೆ.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಆಡಳಿತ ನಡೆಸುವ ಬಿಜೆಪಿ ಪಕ್ಷದ, ಕರ್ನಾಟಕದ, ದಕ್ಷಿಣ ಕನ್ನಡ ಸುಶಿಕ್ಷಿತ ಜಿಲ್ಲೆಯ ಶಾಸಕರಾಗಿ, ಅದರಲ್ಲೂ ವೈದ್ಯರಾಗಿ ಇಂತಹ ನಿಂದನೀಯ ಹೇಳಿಕೆ ಶೋಭೆ ತರುವುದಿಲ್ಲ ಅಲ್ಲದೆ ಭವಿಷ್ಯದ ಯುವ ಜನಾಂಗಕ್ಕೆ ಕೆಟ್ಟ ಮಾದರಿಯ ಸಂಸ್ಕೃತಿಯನ್ನು ಪ್ರಚಾರ ಪಡಿಸಿ ಸಮಾಜದ ಸ್ವಾಸ್ಥ್ಯಕ್ಕೆ ಗಂಭೀರ ಸವಾಲಾಗಿದೆ.
ಇಂಡಿಯಾ ಒಕ್ಕೂಟದ ಸಂಸತ್ತಿನ ಸಾಂವಿಧಾನಿಕ ಹುದ್ದೆಯ ವಿಪಕ್ಷ ನಾಯಕ ರಾಹುಲ್ ಗಾಂದಿ ವಿರುದ್ದ ಮಂಗಳೂರು ಶಾಸಕ ಭರತ್ ಶೆಟ್ಟಿಯವರ ಹಿಂಸೆಗೆ ಪ್ರಚೋದನೆಯ, ಲಘುವಾದ ಮಾತು, ದೇಶದ ಮತದಾರರ ಅವಹೇಳನವಾಗಿದ್ದು, ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ ಎಡಮಲೆ ಹೇಳಿಕೆಯಲ್ಲಿ ಖಂಡಿಸಿದ್ದಾರೆ