ಸುಳ್ಯ: ಫೆಬ್ರವರಿ 11. ವಿಮೆನ್ ಇಂಡಿಯಾ ಮೂಮೆಂಟ್ ನ ವತಿಯಿಂದ ಮಹಿಳಾ ಸಮ್ಮಿಲನ ಕಾರ್ಯಕ್ರಮ ಸುಳ್ಯದ ಗಾಂಧಿನಗರದಲ್ಲಿ ಇಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಳ್ಯ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಸಬೀನ ಅಂಕತಡ್ಕ, ಉಪಾಧ್ಯಕ್ಷೆಯಾಗಿ ಸನಾ ಸುಳ್ಯ, ಕಾರ್ಯದರ್ಶಿಯಾಗಿ ಸಮೀನಾ ರೆಹಮಾನ್, ಜೊತೆ ಕಾರ್ಯದರ್ಶಿಯಾಗಿ ಹಸೀನ ತಾಜುದ್ದೀನ್ ಕೋಶಾಧಿಕಾರಿಯಾಗಿ ನಸೀಬಾ ಸಿದ್ದೀಕ್ ಹಾಗೂ ಸಮಿತಿ ಸದಸ್ಯರುಗಳಾಗಿ ಆಬಿದಾ ಸೆಲೀಂ , ಕೈರುನ್ನೀಶ ಮತ್ತು ಸಾಬಿರ ಮಜೀದ್ ಆಯ್ಕೆಯಾಗಿರುತ್ತಾರೆ.

ವಿಮ್ ಜಿಲ್ಲಾಧ್ಯಕ್ಷೆ ನೌರೀನ್ ಆಲಂಪಾಡಿ ಯವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿಯಾದ ಫಾಯಿನಾ , SDPI ಸುಳ್ಯ ಅಸ್ಸಂಬ್ಲಿ ಅಧ್ಯಕ್ಷರಾದ ಮೀರಾಝ್ , ಇಂಚಾರ್ಜ್ ಅಬ್ದುಲ್ ರಹ್ಮಾನ್ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *