ಸಂಪಾಜೆ: ಲೋಕಾಯುಕ್ತ ಎಸ್ ಪಿ ಮತ್ತು ಮಂಗಳೂರು ವಿಭಾಗದ ಅಧಿಕಾರಿಗಳು ಸಂಪಾಜೆ ಗ್ರಾಮ ಪಂಚಾಯತ್ ಭೇಟಿ ನೀಡಿದ ಸಂದರ್ಭದಲ್ಲಿ ಸಂಪಾಜೆ ಗ್ರಾಮದ ಕಡಪಾಲ ಅಬೂಬಕ್ಕರ್ ಎಂ ಸಿ ಯವರು ಹಲವಾರು ವರ್ಷಗಳಿಂದ ಜನರು ಎದುರಿಸುತ್ತಿರುವ ಪ್ಲಾಟಿಂಗ್
ಸಮಸ್ಯೆಯ ಬಗ್ಗೆ ಲೋಕಾಯುಕ್ತ ಎಸ್ಪಿ ಅವರ ಗಮನಕ್ಕೆ ತಂದರು, ಮತ್ತು ತಮ್ಮ ಜಮೀನಿನ ಪ್ಲಾಟಿಂಗ್ ಸಮಸ್ಯೆಯನ್ನು ಸರಿಪಡಿಸುವಂತೆ ಲಿಖಿತ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು
ಉಪಸ್ಥಿತರಿದ್ದರು.