ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 50ರ ಸಂಭ್ರಮ ಹಾಗೂ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಇದೇ ಬರುವ ಫೆ. 16 2025 ರಂದು ಕನ್ನಡ ಪೆರಾಜೆ ಯಲ್ಲಿ ನಡೆಯಲಿದೆ.

ಉಚಿತ ಕಿವಿಯ ಶ್ರವಣ ತಪಾಸಣೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಮೆಡಿಕಲ್ ಕಿಟ್ ಹಸ್ತಾಂತರ, ಸವಲತ್ತು ವಿತರಣೆ, ವೀಲ್ ಚಯರ್ ಕೊಡುಗೆ, ಕ್ರೀಡಾ ಕೂಟ, ಸ್ವಾಭಿಮಾನಿ ಕನ್ನಡಿಗ ಪ್ರಶಸ್ತಿ ಪ್ರಧಾನ, ಸನ್ಮಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ವಿರಾಜಪೇಟೆ ಶಾಸಕರು ಎ.ಎಸ್ ಪೊನ್ನಣ್ಣ, ಸುಳ್ಯ ವಿಧಾನಸಭಾ ಶಾಸಕಿ ಭಾಗಿರಥಿ ಮುರುಳ್ಯ, ಚೇತನ್ ಅಹಿಂಸಾ (ಚಿತ್ರ ನಟ, ಹೋರಾಟಗಾರ) ಪತ್ರಕರ್ತ ರಾಚಿಂತನ್, ನಜ್ಮಾ ನಝೀರ್ ಚಿಕ್ಕನೇರಳೆ, ಬೈರಪ್ಪ ಹರೀಶ್ ಕುಮಾರ್, ಜಾಬಿರ್ ನಿಝಮಿ, ಸಮದ್ ಗಡಿಯಾರ, ಅಶ್ರಫ್ ಸವಣೂರು ಇತರ ಸಾಮಾಜಿಕ, ರಾಜಕೀಯ ನೇತಾರರು ಆಗಮಿಸಲಿದ್ದಾರೆ.