Advertisement

ಪೋಲಿಸರ ಕ್ಷಿಪ್ರ ಕಾರ್ಯಾಚರಣೆ

ಅ.೯ ರಂದು ಪಾರ್ಕಿಂಗ್ ಮಾಡಿದ ಕಾರಿನಿಂದ ಗಾಜು ಒಡೆದು, ಅದರಲ್ಲಿದ್ದ ಚಿನ್ನ ಕಳ್ಳತನ ಮಾಡಿದ ಅರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯ ಎಸ್ ಐ ಕಾರ್ತಿಕ್ ಹಾಗೂ ಕ್ರೈಂ ಎಸ್ ಐ ಮುರಳಿಧರ ನಾಯಕ್ ನೇತೃತ್ವದಲ್ಲಿ ಎ.ಎಸ್ ಐ ಕರುಣಾಕರ ಹಾಗೂ ಸಿಬ್ಬಂಧಿಗಳು ಸೇರಿ ಕಳ್ಳನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪೊಲೀಸರ ಎರಡು ತಂಡ ರಚಿಸಿ ಆರೋಪಿಯನ್ನು ಹಿಡಿಯಲು ಬಲೆ ಬೀಸಿ ಯಶಸ್ವಿಯಾಗಿದ್ದಾರೆ. ಕಳ್ಳತನದ ಜಾಡು ಹಿಡಿಯಲು ಸಿ.ಸಿ ಕ್ಯಾಮಾರಾ ಫೂಟೇಜ್ ತೆಗೆದು ಟ್ರೇಸ್ ಮಾಡಲಾಗಿತ್ತು. ಇದರನ್ವಯ ಪ್ರಭಾಕರ ಹೊನ್ನವಳ್ಳಿ ಎಂಬ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ, ಈತನ ಮೇಲೆ ಹೊನ್ನವಳ್ಳಿ ಸೇರಿದಂತೆ ಬೇರೆ ಬೇರೆ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ದೇವಸ್ಥಾನ ಗಳಿಗೆ ಹೋಗಿ ಉಪಾಯದಿಂದ ಯಾರು ಇಲ್ಲದ ಸಮಯ ನೋಡಿಕೊಂಡು ಕಾರಿನ ಗಾಜುಗಳನ್ನು ಪುಡಿ ಮಾಡಿ, ಕಾರನಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ಚಾಳಿ ಬೆಳೆಸಿಕೊಂಡಿಸಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯದಲ್ಲಿ ಈತ ಈ ಹಿಂದೆಯೂ ಒಮ್ಮೆ ಕಳ್ಳತನ ಮಾಡಿದ್ದು ಇತ್ತೀಚೆಗೆ ಧರ್ಮಸ್ಥಳದಲ್ಲೂ ಕಳ್ಳತನ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನವಾಗಿರುವುದಾಗಿ ತಿಳಿದು ಬಂದಿದೆ. ಆರೋಪಿಯಿಂದ ಕಳ್ಳತನ ಮಾಡಿದ ಕೆಲ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ