ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಂವ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್‌ ಟ್ಯಾಂಕ‌ರ್ ಹೆದ್ದಾರಿ ಪಕ್ಕದ ನದಿಗೆ ಬಿದ್ದ ಘಟನೆ ಬುಧವಾರ ನಡೆದಿದೆ. ಕುಮಟಾ ಕಡೆಯಿಂದ ಮಂಗಳೂರಿನ ಕಡೆ ಗ್ಯಾಸ್ ಟ್ಯಾಂಕರ್ ಚಲಿಸುತ್ತಿದ್ದು, ಈ ವೇಳೆ ಹೊನ್ಮ೦ವ್ ಕ್ರಾಸ್ ಬಳಿ ಹೋಗುತ್ತಿದ್ದ ವೇಳೆ ಟ್ಯಾಂಕ‌ರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದಿದೆ .

ಟ್ಯಾಂಕರ್ ಪಲ್ಟಿಯಾಗಿರುವುದರಿಂದ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ತಕ್ಷಣ ಆತನನ್ನು ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *