ಫೆ.19 SKSSF ಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ SKSSF ಸುಳ್ಯ ಟೌನ್ ಶಾಖಾ ವತಿಯಿಂದ ನಡೆಯಿತು.
SKSSF ಸುಳ್ಯ ಟೌನ್ ಅಧ್ಯಕ್ಷ ಮಸೂದ್ ಮಚ್ಚು ಧವಜಾರೋಹಣಗೈದರು, ಜಲಾಲುದ್ದೀನ್ ಯಮಾನಿ ಉಸ್ತಾದ್ ದುವಾ ನೆರವೇರಿಸಿದರು. SKSSF ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಕರಾವಳಿ ಸಂದೇಶ ಭಾಷಣ ನಡೆಸಿದರು . SKSSF ಸುಳ್ಯ ವಲಯ ಕೋಶಾಧಿಕಾರಿ ಕಲಂದರ್ ಎಲಿಮಲೆ ಹಾಗು ಸುಳ್ಯ ಕ್ಲಸ್ಟರ್ ಪ್ರ. ಕಾರ್ಯದರ್ಶಿ ಇಕ್ಬಾಲ್ ಸುಣ್ಣಮೂಲೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸಮಸ್ತದ ನಾಯಕರುಗಳಾದ ಹಾಜಿ ಎಸ್.ಎ ಹಮೀದ್ ,ಹಾಜಿ ಅಹ್ಮದ್ ಸುಪ್ರೀಂ , ಹಾಜಿ ಅಹ್ಮದ್ ಪಾರೆ, ಹಾಜಿ ಅಬ್ದುಲ್ ಖಾದರ್ ಆಝಾದ್,ಇಬ್ರಾಹಿಂ ಶಿಲ್ಪಾ, SKSSF ಸುಳ್ಯ ಟೌನ್ ಇಕ್ಬಾಲ್ ಸುಳ್ಯ, ಕ್ಲಸ್ಟರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕರಾವಳಿ,ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ, SKSSF ಸುಳ್ಯ ಟೌನ್ ಸದಸ್ಯರಾದ ಶಾದ್ ಪೈಚಾರ್, ಜಾಝಿನ್ ಜಟ್ಟಿಪಲ್ಲ, ನಿಜಾರ್ ಒರ್ಕುಟ್, ಶಾನ್ ಕಟ್ಟೆಕ್ಕಾರ್,ಜಲಾಲ್ ಅಡ್ಕಾರ್,ಸಲಾಂ ಕಲ್ಲುಗುಂಡಿ ಉಪಸ್ಥಿತರಿದ್ದರು. ಗಾಂಧಿನಗರ ಕೇಂದ್ರ ಜುಮಾ ಮಸೀದಿಯಲ್ಲಿ ಖಬರ್ ಝಿಯಾರತ್ ನಡೆಸಲಾಯಿತು. ಕಾರ್ಯಕ್ರಮವನ್ನು ಆಶಿಕ್ ಸುಳ್ಯ ಸ್ವಾಗತಿಸಿ, ರವೂಫ್ ಆರ್.ಬಿ.ಎ ವಂದಿಸಿದರು.