ನಟಸಾರ್ವಭೌಮ’ (Natasaarvabhowma) ಸಂಗೀತ ನಿರ್ದೇಶಕ ಡಿ ಇಮ್ಮಾನ್- ಅವರ ಮೊದಲ ಪತ್ನಿಯ ವೈಯಕ್ತಿಕ ವಿಚಾರದಲ್ಲಿ ಶಿವಕಾರ್ತಿಕೇಯನ್ ಹೆಸರು ಕೇಳಿ ಬಂದಿದೆ. ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಶಿವಕಾರ್ತಿಕೇಯನ್ (Sivakarthikeyan) ವಿರುದ್ಧ ಡಿ ಇಮ್ಮಾನ್ (D Imman)  ಆರೋಪವೊಂದನ್ನು ಮಾಡಿದ್ದು, ಇಮ್ಮಾನ್ ಮೊದಲ ಪತ್ನಿಗೂ ಅಫೇರ್ ಇತ್ತಾ ಎಂಬ ಚರ್ಚೆ ನಡೆಯುತ್ತಿದೆ. ಇದು ಶಿವಕಾರ್ತಿಕೇಯನ್‌ಗೆ ಸಮಸ್ಯೆ ತಂದೊಡ್ಡಿದೆ. 2008ರಲ್ಲಿ ಮೋನಿಕಾ ರಿಚರ್ಡ್ ಎಂಬುವರನ್ನು ಮದುವೆ ಆಗಿದ್ದ ಡಿ ಇಮ್ಮಾನ್ 2021ರಲ್ಲಿ ಡಿವೋರ್ಸ್ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ಅಮೆಲಿ ಎಂಬುವರನ್ನು 2ನೇ ಮದುವೆ ಆಗಿದ್ದರು. ಇಮ್ಮಾನ್- ಮೋನಿಕಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇತ್ತೀಚೆಗೆ ಇಮ್ಮಾನ್ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವಾಗ ತಮ್ಮ ಹಾಗೂ ಮೊದಲ ಪತ್ನಿ ಡಿವೋರ್ಸ್‌ಗೆ ಶಿವಕಾರ್ತಿಕೇಯನ್ ಕಾರಣ ಎಂದು ಪರೋಕ್ಷವಾಗಿ ಆರೋಪ ಮಾಡಿದ್ದಾರೆ. ಶಿವಕಾರ್ತಿಕೇಯನ್ ಮಾಡಿದ ದ್ರೋಹವನ್ನು ನಾನು ಎಂದಿಗೂ ಮರೆಯುವುದಿಲ್ಲ. ಆದರೆ ಅವರು ಮಾಡಿದ ದ್ರೋಹ ಏನೆಂದು ಹೇಳಲಾಗುವುದಿಲ್ಲ. ಏಕೆಂದರೆ ನನಗೆ ನನ್ನ ಮಕ್ಕಳ ಭವಿಷ್ಯ ಬಹಳ ಮುಖ್ಯ ಎಂದು ಇಮ್ಮಾನ್ ಹೇಳಿದ್ದಾರೆ. ಮಕ್ಕಳ ಭವಿಷ್ಯಕ್ಕೂ, ಶಿವಕಾರ್ತಿಕೇಯನ್ ಮಾಡಿದ ದ್ರೋಹಕ್ಕೂ ಏನು ಸಂಬಂಧ? ಇಮ್ಮಾನ್ ಈ ರೀತಿ ಹೇಳಲು ಕಾರಣವೇನು? ನಿರ್ದೇಶಕನ ಮೊದಲ ಪತ್ನಿಯ ಜೊತೆಗೆ ನಟನಿಗೆ ಅಫೇರ್ ಇರಬಹುದಾ ಎಂದೆಲ್ಲಾ ಚರ್ಚೆ ಶುರುವಾಗಿದೆ. ಆದರೆ ಈ ಆರೋಪವನ್ನು ಮೋನಿಕಾ ರಿಚರ್ಡ್ ನಿರಾಕರಿಸಿದ್ದಾರೆ. ಶಿವಕಾರ್ತಿಕೇಯನ್ ನನಗೆ ಹಾಗೂ ಇಮ್ಮಾನ್ ಇಬ್ಬರಿಗೂ ಬಹಳ ಒಳ್ಳೆಯ ಫ್ರೆಂಡ್. ನಮ್ಮಿಬ್ಬರ ನಡುವೆ ಜಗಳವಾದಾಗ, ಡಿವೋರ್ಸ್ ವಿಚಾರ ಬಂದಾಗ ಶಿವಕಾರ್ತಿಕೇಯನ್ ನಾವಿಬ್ಬರೂ ದೂರ ಆಗದಂತೆ ತಡೆದಿದ್ದರು. ಕಾರಣ ತಿಳಿದು ಅವರು ನನ್ನ ಪರ ನಿಂತಿದ್ದರು. ತನಗೆ ಸಪೋರ್ಟ್ ಮಾಡಲಿಲ್ಲ ಎಂಬ ಕಾರಣಕ್ಕೆ ಈಗ ಇಮ್ಮಾನ್, ಶಿವಕಾರ್ತಿಕೇಯನ್ ವಿರುದ್ದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಅಫೇರ್ ಬಗ್ಗೆ ಮಾತನಾಡುವುದು ಏನೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇಮ್ಮಾನ್ ಮೊದಲ ಪತ್ನಿ ಜೊತೆಗಿನ ಅಫೇರ್ ಸುದ್ದಿಗೆ ನಟ ಶಿವಕಾರ್ತಿಕೇಯನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಮ್ಮಾನ್ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದು ಆ ಹಾಡುಗಳು ಸೂಪರ್ ಹಿಟ್ ಆಗಿವೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರಕ್ಕೆ ಕೂಡಾ ಇದೇ ಇಮ್ಮಾನ್ ಸಂಗೀತ ನೀಡಿದ್ದಾರೆ. ಇಮ್ಮಾನ್ ಮೊದಲ ಪತ್ನಿಗೆ ವಿಚ್ಚೇದನ ನೀಡಿದ್ದು ಈಗ 2ನೇ ಮದುವೆ ಆಗಿದ್ದಾರೆ. ಶಿವಕಾರ್ತಿಕೇಯನ್ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ‘ವಜ್ರಕಾಯ’ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಆರತಿ ಎಂಬುವರನ್ನು ಕೈ ಹಿಡಿದಿರುವ ಶಿವಕಾರ್ತಿಕೇಯನ್‌ಗೆ ಇಬ್ಬರು ಮಕ್ಕಳಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ