ಸುಳ್ಯ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮರಕೊಟ್ಲು ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಜಿಲ್ಲಾದ್ಯಂತ ಕರೆ ನೀಡಿದ್ದ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಳ್ಯದ ಗಾಂಧಿನಗರ, ಸವಣೂರು ಹಾಗೂ ನೆಲ್ಯಾಡಿಯಲ್ಲಿ ಇಂದು (ಫೆಬ್ರವರಿ 22) ಭಾರಿ ಜನ ಬೆಂಬಲದೊಂದಿಗೆ ಸಹಿ ಅಭಿಯಾನ ನಡೆಯಿತು.
ಬ್ರಹ್ಮರಕೊಟ್ಲು ಅಭಿಜ್ಞಾನಿಕ ಹಾಗೂ ಅಸಮರ್ಪಕ ಟೋಲ್‌ಗೇಟ್ ಜನಸಾಮಾನ್ಯರಿಗೆ ತಲೆನೋವಾಗಿ ಪರಿಣಮಿಸಿದೆ. ರಸ್ತೆ ಸರಿಯಾಗಿಲ್ಲದಿದ್ದರೂ ಟೋಲ್ ಪಾವತಿಸಿ ಹೋಗುವ ಅನಿವಾರ್ಯತೆ ಇರುವುದು ಖೇದಕರ ಎನ್ನುವ ಅಭಿಪ್ರಾಯ ಜನಸಾಮಾನ್ಯರಿಂದ ಕೇಳಿಬಂತು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಜಿಲ್ಲಾ ಸಮಿತಿಯ ಸದಸ್ಯರಾದ ಅಬ್ದುಲ್ ಕಲಾಂ ಸುಳ್ಯ, ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮಿರಾಝ್ ಸುಳ್ಯ, ಕಾರ್ಯದರ್ಶಿಯವರಾದ ರಫೀಕ್ ಎಂ.ಎಸ್
ಬ್ಲಾಕ್ ಕಾರ್ಯದರ್ಶಿ ಸುಹೈಲ್ ಸುಳ್ಯ, SKSSF ಸುಳ್ಯ ನಗರ ಶಾಖೆಯ ಅಧ್ಯಕ್ಷರು ಮಸೂದ್ (ಮಚ್ಚು)
ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆಶಿಕ್ ಅರಂತೋಡು,
ನುಸ್ರತುಲ್ ಮಸಾಕೀನ್ ಅಸೋಸಿಯೇಶನ್ ನೆಲ್ಯಾಡಿ ಇದರ ಮಾಜಿ ಅಧ್ಯಕ್ಷರಾದ ರಫೀಕ್ ಆಲಂಪಾಡಿ, ಕಡಬ ಬ್ಲಾಕ್ ಕಾರ್ಯದರ್ಶಿಯವರಾದ ಸಿದ್ದೀಕ್ ನೆಲ್ಯಾಡಿ
ಬೆಳ್ತಂಗಡಿಯ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷಿ ನಾರಾಯಣ ಕೊಕ್ಕಡ ನೆಲ್ಯಾಡಿ, ನುಸ್ರತುಲ್ ಮಸಾಕಿನ್ ಅಸೋಸಿಯೇಶನ್ ನೆಲ್ಯಾಡಿ ಇದರ ಅಧ್ಯಕ್ಷರಾದ ಜಮೀಲ್ ಪಾಷ ನೆಲ್ಯಾಡಿ, ಬಿಲಾಲ್ ಜುಮಾ ಮಸೀದಿ ಉಳಿತೊಟ್ಟು ಅಧ್ಯಕ್ಷರಾದ ಶರೀಫ್ ತಾಜ್, ಕೌಕ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಲೋಕೇಶ್ ಬಾಣಜಾಲು, ಬದ್ರಿಯಾ ಜುಮಾ ಮಸೀದಿ ನೆಲ್ಯಾಡಿ ಇದರ ಅಧ್ಯಾಪಕರಾದ ಖಾದರ್ ಝುಹುರಿ, ಬದ್ರಿಯಾ ಜುಮಾ ಮಸೀದಿ ನೆಲ್ಯಾಡಿ ಇದರ ಮಾಜಿ ಅಧ್ಯಕ್ಷರಾದ ಹನೀಫ್ ಸಿಟಿ, ನಿವೃತ ಯೋಧ ವೀರಪ್ಪ ಗೌಡ ಸವಣೂರು, ನ್ಯಾಯವಾದಿಗಳಾದ ಪ್ರವೀಣ್ ಬಂಬಿಲ, ಮಹೇಶ್ ಕೆ, ಗ್ರಾಮ ಪಂಚಾಯತ್ ಸದಸ್ಯರಾದ ತೀರ್ಥರಾಮ ಕೆಡೆಂಜಿ, ಮಾಜಿ ಸದಸ್ಯರಾದ ಬಾಬು ಅಟ್ಟೋಲೆ, ಸತೀಶ್ ಬಲ್ಯಾಯ, ಕುಮಾರಧಾರ ಆಟೋ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಹೊನ್ನಪ್ಪ ಪೂಜಾರಿ, ಎಸ್‌ಕೆಎಸ್‌ಎಸ್‌ಎಫ್ ಸವಣೂರು ಅಧ್ಯಕ್ಷ ನಝೀರ್ ಮುಂಡತ್ತಡ್ಕ, ಬೆಳ್ಳಾರೆ ಬ್ಲಾಕ್ ಅಧ್ಯಕ್ಷರಾದ ರಫೀಕ್ ಎಂ.ಎ
ಕರ್ನಾಟಕ ಮುಸ್ಲಿಂ ಜಮಾಅತ್ ಸವಣೂರು ಅಧ್ಯಕ್ಷರಾದ ಅಶ್ರಫ್ ಎಂ ಕೆ, ಬದ್ರಿಯಾ ಜುಮಾ ಮಸೀದಿ ಕೊಕ್ಕಡ ಇದರ ಕಾರ್ಯದರ್ಶಿಯಾದ ಅನ್ಸಾರ್ ಕೊಕ್ಕಡ, ಕೆಪಿಸಿಸಿ ಸದಸ್ಯರೂ, ಮಾಜಿ ಕಡಬ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ.ಪಿ ವರ್ಗೀಸ್, ಕಾಂಗ್ರೇಸ್ ಮುಖಂಡರಾದ ಇಂಜಿನಿಯರ್ ಚಾಕೋ, SYS ನೆಲ್ಯಾಡಿ ಕಾರ್ಯದರ್ಶಿಯಾದ ಅಶ್ರಫ್ ಪಡ್ಡಕ್ಕ ಮತ್ತು ಕೋಶಾಧಿಕಾರಿ ಬಶೀರ್ ಪಿ.ಎಸ್ ಸಹಿತ ಹಲವು ರಾಜಕೀಯ ಧುರೀಣರು, ಧಾರ್ಮಿಕ ಸಾಮಾಜಿಕ ಮುಖಂಡರಿಂದ ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಲಾಯಿತು.