ಸುಳ್ಯ ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ಸುಳ್ಯ ಜೂನಿಯ‌ರ್ ಕಾಲೇಜು ಮೈದಾನದಲ್ಲಿ ನಡೆದ 15 ನೇ ವರ್ಷದ ಸುದ್ದಿ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಸುಳ್ಯದ ವರ್ತಕರ ತಂಡ ಚಾಂಪಿಯನ್ ಪಟ್ಟ ತನ್ನದಾಗಿಸಿದರೆ, ಸುಳ್ಯದ ಪೋಲೀಸ್‌ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಸೆಮಿ ಫೈನಲ್‌ ಪಂದ್ಯಾಟದಲ್ಲಿ ಮೆಸ್ಕಾಂ ತಂಡವನ್ನು ಮಣಿಸಿ ಪೋಲೀಸ್‌ ತಂಡ ಫೈನಲಿಗೇರಿದರೆ, ಗ್ಯಾರೇಜ್ ತಂಡವನ್ನು ಸೋಲಿಸಿ ವರ್ತಕರ ತಂಡ ಫೈನಲಿಗೇರಿತು. ಫೈನಲ್‌ ಪಂದ್ಯಾಟದಲ್ಲಿ ಪೋಲೀಸ್ ತಂಡವನ್ನು ಮಣಿಸಿದ ವರ್ತಕರ ತಂಡ ಚಾಂಪಿಯನ್ ಆಯಿತು. ಪೋಲೀಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಸುಳ್ಯ ರೇಂಜ‌ರ್ ಮಂಜುನಾಥ್, ಸುಳ್ಯ ಎಸ್.ಐ. ಸಂತೋಷ್, ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಉದ್ಯಮಿ ಶಾಫಿ ಕುತ್ತಮೊಟ್ಟೆ, ಯುವಜನ ಸಂಯುಕ್ತ ಮಂಡಳಿ ಗೌರವ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಸುದ್ದಿ ಸಂಪಾದಕರಾದ ಹರೀಶ್ ಬಂಟ್ವಾಳ್, ಚಾನೆಲ್ ಮುಖ್ಯಸ್ಥರಾದ ದುರ್ಗಾಕುಮಾ‌ರ್ ನಾಯರ್ ಕೆರೆ, ಮಾಹಿತಿ ವಿಭಾಗ ಮುಖ್ಯಸ್ಥರಾದ ಕೃಷ್ಣ ಬೆಟ್ಟ, ಪ್ರಕಾಶಕರಾದ ಕುಶಾಂತ್ ಕೊರತ್ಯಡ್ಕ, ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ, ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷೆ ಪ್ರಜ್ಞಾ ಎಸ್.ನಾರಾಯಣ, ವರ್ತಕರ ಸಂಘದ ಹಂಝ ಕಾತೂನ್, ಪೋಲೀಸ್ ತಂಡದ ನವೀನ್ ಹಾಗೂ ಪಂದ್ಯಾಟದ ಆಯೋಜಕರಾದ ಶ್ರೀಧರ ಕಜೆಗದ್ದೆಯವರು ವೇದಿಕೆಯವರಿದ್ದು ಬಹುಮಾನ ಹಸ್ತಾಂತರ ಮಾಡಲಾಯಿತು. ಶರೀಫ್‌ ಜಟ್ಟಿಪಳ್ಳ ಬಹುಮಾನ ಪಟ್ಟಿ ವಾಚಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರ್ವಹಿಸಿದರು. ಸುದ್ದಿ ಬಳಗದವರ ಸಹಕಾರದಲ್ಲಿ ಪಂದ್ಯಾಟ ನೆರವೇರಿತು.

Leave a Reply

Your email address will not be published. Required fields are marked *