ಸುಳ್ಯ: ಇಲ್ಲಿನ ಜನಪ್ರಿಯ ಕಫೆ ಯಾಗಿರುವ ಸುಳ್ಯದ ಕಟ್ಟೆಕ್ಕಾರ್ ಮೆಗಾ ಶಾಪ್ ಬಳಿಯಿರುವ ಮಚ್ಚೂಸ್ ಮಾರ್ಟ್ ನಿಂದ ಉಚಿತ ಇಫ್ತಾರ್ ಕೂಟ ಹಮ್ಮಿಕೊಂಡಿದ್ದಾರೆ.
ಹೌದು ಮುಸ್ಲಿಂ ಸಮುದಾಯದ ಪವಿತ್ರ ತಿಂಗಳಾದ ರಮದಾನ್ ನಲ್ಲಿ ಉಪವಾಸ ಅನುಷ್ಠಾನ ಕಡ್ಡಾಯ. ರಮದಾನ್ ನಲ್ಲಿ ಹೀಗೆ ಉಪವಾಸ(ನೋಂಬ್) ಹಿಡಿದ ಯಾತ್ರಿಕರಿಗೆ, ದೂರದಿಂದ ಆಸ್ಪತ್ರೆಗೆ ಬಂದು ರೋಗಿಯ ಆರೈಕೆ ಮಾಡುವವರಿಗೆ, ಹಾಗೂ ಬಡ ಕಾರ್ಮಿಕರಿಗೆ ಇಫ್ತಾರ್ ಕೂಟ 30 ದಿನದಲ್ಲೂ ಉಚಿತವಾಗಿ ನೀಡಲಿದ್ದೇವೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.