ನ್ನಡದ ಯುಟ್ಯೂಬರ್ ಸಮೀರ್ ಎಂಬಾತ ತನ್ನ ವಿಭಿನ್ನ ವಿಡಿಯೊಗಳಿಂದ ಯುವ ವೀಕ್ಷಕ ವರ್ಗವನ್ನು ತನ್ನತ್ತ ಸೆಳೆದವರು. ಮಾಟ, ದೆವ್ವ ಹಾಗೂ ವಿಸ್ಮಯಗಳಂತಹ ವಿಭಿನ್ನ ವಿಡಿಯೊಗಳನ್ನು ಮಾಡುತ್ತಾ ಬರುತ್ತಿದ್ದ ಸಮೀರ್ ಆಗಾಗ ಕೆಲ ಘಟನೆಗಳ ಕುರಿತು ಸಹ ವಿಡಿಯೊಗಳನ್ನು ಮಾಡುತ್ತಿದ್ದರು. ಹೀಗೆ ಒಳ್ಳೊಳ್ಳೆ ಅಂಶಗಳಿರುವ ವಿಡಿಯೊಗಳನ್ನು ಮಾಡುತ್ತಾ ಬಂದಿರುವ ಸಮೀರ್ ಸದ್ಯ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಹೊಸ ವಿಡಿಯೊವೊಂದನ್ನು ಹಂಚಿಕೊಂಡಿದ್ದು ಸದ್ಯ ಆ ವಿಡಿಯೊ ಸಖತ್ ವೈರಲ್ ಆಗಿದೆ.
ಹೌದು, ದಶಕದ ಹಿಂದೆ ನಡೆದಿದ್ದ ಸೌಜನ್ಯಾ ರೇಪ್ ಅಂಡ್ ಮರ್ಡರ್ ಕೇಸ್ ಕುರಿತು ಸಮೀರ್ ವಿಡಿಯೊ ಮಾಡಿದ್ದಾರೆ. ಈ ವಿಡಿಯೊದಲ್ಲಿ ಸೌಜನ್ಯಾ ಕೊಲೆಯ ಕುರಿತು ವಿವರಿಸಿರುವ ಸಮೀರ್ ಪ್ರಕರಣದಲ್ಲಿ ಎಲ್ಲೆಲ್ಲಿ ಸಾಕ್ಷ್ಯ ನಾಶವಾಯಿತು ಹಾಗೂ ನಿರಪರಾಧಿಯನ್ನು ಹೇಗೆ ಸಿಕ್ಕಿಹಾಕಿಸಲಾಯಿತು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಇದೇ ವಿಡಿಯೊದ ಆರಂಭದಲ್ಲಿ ಧರ್ಮಸ್ಥಳ ದೇವಾಲಯ ಒಂದು ಜೈನ್ ದೇವಾಲಯ ಎಂಬುದನ್ನು ಅದರ ಮಾಲೀಕರೇ ಸರ್ಕಾರಕ್ಕೆ ತಿಳಿಸಿದ್ದಾರೆ ಎಂದು ಸಾಕ್ಷಿಯನ್ನೂ ಸಹ ಬಿಚ್ಚಿಟ್ಟಿದ್ದರು ಸಮೀರ್.
ದೂತ ಸಮೀರ್ ಎಂ.ಡಿ ಎಂಬ ಯುಟ್ಯೂಬರ್ ಮಾಡಿದ್ದ ಸೌಜನ್ಯ ಕೊಲೆ ತನಿಖೆ ಕತೆ ಯಾವುದೇ ಸಿನಿಮಾಗೂ ಕಮ್ಮಯಿಲ್ಲದಂತಾಗಿದೆ. ಕೇವಲ 5 ದಿನಗಳಲ್ಲಿ ಬರೋಬ್ಬರಿ 65ಲಕ್ಷ ಜನರು ವೀಕ್ಷಿಣೆ ಮಾಡಿದ್ದಾರೆ. ಆದರೆ ಈ ಯುಟ್ಯೂಬರ್ ತಮ್ಮ ವೈಯಕ್ತಿಕ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಜಾತಿ ಧರ್ಮ ಎಲ್ಲಿಂತ ಬಂತು ಅಂತ ನನಗಂತು ಗೊತ್ತಿಲ್ಲ, ನನ್ ಮನೆ ಅಡ್ರಸ್ ಲೀಕ್ ಮಾಡಿರೋರಿಗೆ, ನನ್ ಫೋನ್ ನಂಬರ್ ಲೀಕ್ ಮಾಡಿರೋರಿಗೆ, ನನ್ನ ಹುಡುಕಿಕೊಂಡು ಬಂದು ಹೊಡಿಯೋದು ಮ್ಯಾಟರೇ ಆಗಲ್ಲ, ಸೋ ಹೇಳೋಕೆ ಆಗಲ್ಲ ನನ್ ಜೊತೆ ಯಾವಾಗ ಏನು ಆಗುತ್ತೆ ಅಂತ, ಆದ್ದರಿಂದ ಈ ವಿಷಯದಲ್ಲಿ ಎಲ್ಲಾ ಕಂಟೆಂಟ್ ಕ್ರಿಯೇಟರ್ ಸಪೋರ್ಟ್ ಮಾಡಿ ಅಂತ ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.