ಓರ್ವ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಎರಡು ದಾಖಲೆಗಳ ಫೋಟೋ ಹಂಚಿಕೊಂಡಿದ್ದು, ನೆಟ್ಟಿಗರಿಂದ ಸಹಾಯ ಕೇಳಿದ್ದಾರೆ. ನಮ್ಮ ಮನೆಯಲ್ಲಿ ನನಗೆ ಈ ಎರಡು ದಾಖಲೆಗಳು ಸಿಕ್ಕಿವೆ. ಇವುಗಳನ್ನು ಏನು ಮಾಡಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. ನನಗೆ ಯಾರಾದ್ರೂ ಸಹಾಯ ಮಾಡಿರುವಿರಿ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಎರಡು ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು, ನೀವು ಲಕ್ಷಾಧಿಪತಿಗಳಾಗಿದ್ದೀರಿ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ. ಆ ದಾಖಲೆಯಲ್ಲಿ ಏನಿತ್ತು ಎಂಬುದರ ಮಾಹಿತಿ ಇಲ್ಲಿದೆ.

ರತನ್ ಧಿಲ್ಲೋನ್ ಎಂಬವರು ರಿಲಯನ್ಸ್ ಷೇರು ಖರೀದಿಯ ಎರಡು ದಾಖಲೆಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಎರಡು ದಾಖಲೆಗಳು ನನಗೆ ನಮ್ಮ ಮನೆಯಲ್ಲಿ ಸಿಕ್ಕಿವೆ. ಆದರೆ ನನಗೆ ಷೇರು ಮಾರುಟ್ಟೆಯ ಕುರಿತು ಹೆಚ್ಚು ಜ್ಞಾನವಿಲ್ಲ. ನಾವು ಈ ಷೇರುಗಳುನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ನಮಗೆ ಸಲಹೆ ನೀಡಿ ಎಂದು ಬರೆದುಕೊಂಡು ಈ ಟ್ವೀಟ್‌ನ್ನು ರಿಲಯನ್ಸ್ ಗ್ರೂಪ್‌ಯೂ ಟ್ಯಾಗ್ ಮಾಡಿದ್ದಾರೆ.

ದಾಖಲೆಗಳ ಪ್ರಕಾರ, ಎರಡು ಬಾರಿ ರಿಲಯನ್ಸ್ ಕಂಪನಿಯ ಷೇರುಗಳನ್ನು ಖರೀದಿಸಲಾಗಿದೆ. 1987 ಮತ್ತು 1992ರ ಅವಧಿ ನಡುವೆ ಧಿಲ್ಲೋನ್ ಕುಟುಂಬ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ 30 ಷೇರುಗಳನ್ನು ಖರೀದಿ ಮಾಡಿದೆ. ಮೊದಲು 1987ರಲ್ಲಿ 20 ಷೇರು ಮತ್ತು ಎರಡನೇ ಬಾರಿ 1992ರಲ್ಲಿ 10 ಷೇರುಗಳನ್ನು ಖರೀದಿಸಲಾಗಿದೆ. ಈ ಸಮಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಒಂದು ಷೇರಿನ ಬೆಲೆ 10 ರೂಪಾಯಿ ಆಗಿತ್ತು. ಈ ಷೇರುಗಳು 30 ವರ್ಷಗಳ ಹಿಂದೆ ಖರೀದಿಸಲಾಗಿತ್ತು. ಅಂದು ಡಿಜಿಟಲ್ ಫಾರ್ಮೆಟ್ ಇಲ್ಲದ ಕಾರಣ ಷೇರು ಖರೀದಿದಾರಿಗೆ ಈ ರೀತಿಯ ದಾಖಲೆಗಳನ್ನು (ಬಾಂಡ್) ವಿತರಣೆ ಮಾಡಲಾಗುತ್ತಿತ್ತು.

ಸದ್ಯ ಈ ಷೇರುಗಳ ಬೆಲೆ ಎಷ್ಟು?
ಕಳೆದ 30 ವರ್ಷಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಯ ಷೇರುಗಳಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಓರ್ವ ಬಳಕೆದಾರರು, 30 ವರ್ಷದಲ್ಲಿ ರಿಲಯನ್ಸ್ ಕಂಪನಿ ಮೂರು ಬಾರಿ ಷೇರುಗಳನ್ನು ವಿಭಜನೆ (Splits Shares) ಮಾಡಿದೆ. ಈ ವಿಭಜನೆಯ ಪ್ರಕಾರ, ನಿಮ್ಮ ಬಳಿಯಲ್ಲಿರುವ ಷೇರುಗಳ ಸಂಖ್ಯೆ 960 ಆಗುತ್ತದೆ. ಸದ್ಯ ಬೆಲೆಗಳ ಪ್ರಕಾರ, 960 ಷೇರುಗಳ ಬೆಲೆ 11.88 ಲಕ್ಷ ರೂಪಾಯಿ ಆಗುತ್ತದೆ ಎಂದು ವಿವರಿಸಿದ್ದಾರೆ. ಬರೋಬ್ಬರಿ 30 ವರ್ಷದ ಹಿಂದೆ ರತನ್ ದಿಲ್ಲೋನ್ ಕುಟುಂಬಸ್ಥರು 300 ರೂಪಾಯಿ ನೀಡಿ 30 ಷೇರುಗಳನ್ನು ಖರೀದಿಸಿದ್ದರು. ಇದೀಗ ಇವುಗಳ ಮೌಲ್ಯ 11.88 ಲಕ್ಷ ರೂ.ಗೆ ಏರಿಕೆಯಾಗಿದೆ. ಹಾಗೆಯೇ ವಿಭಜನೆಯ ಕಾರಣದಿಂದ ಷೇರುಗಳ ಸಂಖ್ಯೆಯೂ ಏರಿಕೆಯಾಗಿದೆ. ಈ ರೀತಿಯ ಘಟನೆಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಸದ್ಯ ರತನ್ ಧಿಲ್ಲೋನ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಮನೆಯಲ್ಲಿ ಇನ್ನು ಸ್ವಲ್ಪ ಹುಡುಕಾಡಿ. ಎಂಆರ್‌ಎಫ್‌ ಷೇರು ಖರೀದಿಯ ದಾಖಲೆಗಳು ಸಿಗಬಹುದು ಎಂದು ಕಮೆಂಟ್ ಮಾಡಿದ್ದಾರೆ. ರತನ್ ಧಿಲ್ಲೋನ್ ಮೊದಲು ಈ ದಾಖಲೆಯನ್ನು ಡಿಜಿಟಲ್ ರೂಪಕ್ಕೆ ವರ್ಗಾಯಿಸಬೇಕಾಗುತ್ತದೆ. ಇದಕ್ಕಾಗಿ ಈ ಷೇರುಗಳನ್ನು ಹೊಂದಿರುವ ವ್ಯಕ್ತಿಯ ದಾಖಲೆಗಳು ಮತ್ತು ಕುಟುಂಬ ಸದಸ್ಯರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನಂತರ ಈ ಷೇರುಗಳನ್ನು ಡಿಮ್ಯಾಟ್ ಖಾತೆಗೆ ವರ್ಗಾಯಿಸಲಾಗುತ್ತದೆ. ಅದರ ನಂತರ ಧಿಲ್ಲೋನ್ ಕುಟುಂಬವು ಈ ಷೇರುಗಳನ್ನು ಬೇಕಿದ್ದರೆ ನಗದೀಕರಿಸಬಹುದು..

Leave a Reply

Your email address will not be published. Required fields are marked *