ಮುಂಬೈ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ (Mukesh Ambani) ತಮ್ಮ ಪತ್ನಿ ನೀತಾ ಅಂಬಾನಿಗೆ (Nita Ambani) ದೇಶದ ಅತ್ಯಂತ ದುಬಾರಿ ಕಾರನ್ನು (Car) ಉಡುಗೊರೆ ನೀಡಿರುವುದಾಗಿ ವರದಿಯಾಗಿದೆ. ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ತಮ್ಮ ವ್ಯವಹಾರ, ದೇಣಿಗೆ ಮಾತ್ರವಲ್ಲದೆ ಐಷಾರಾಮಿ ಜೀವನಶೈಲಿಗೆ ಆಗಾಗ ಸುದ್ದಿಯಲ್ಲಿರುತ್ತಾರೆ. ಅಂಬಾನಿ ಕುಟುಂಬ ಭಾರತದ ಅತ್ಯಂತ ಶ್ರೀಮಂತ ಕುಟುಂಬವಾಗಿದೆ. ತಮ್ಮ ಆಂಟಿಲಿಯಾ ಹೆಸರಿನ 15,000 ಕೋಟಿ ರೂ.ಯ ನಿವಾಸದಲ್ಲಿರುವ ಗ್ಯಾರೇಜ್‌ನಲ್ಲಿ ಪ್ರಪಂಚದ ಅತ್ಯಂತ ದುಬಾರಿ ಕಾರುಗಳೇ ತುಂಬಿವೆ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ನಿವಾಸದ ಪಾರ್ಕಿಂಗ್ ಸ್ಥಳದಲ್ಲಿ ದೇಶದ ಅತ್ಯಂತ ದುಬಾರಿ ಕಾರುಗಳನ್ನು ಕಾಣಬಹುದು. ಮುಖೇಶ್ ಅಂಬಾನಿ, ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ತಮ್ಮ ದುಬಾರಿ ಕಾರುಗಳಲ್ಲಿ ಕೆಲ ಕಾರ್ಯಕ್ರಮಗಳಿಗೆ ಆಗಮಿಸುವುದನ್ನು ಆಗಾಗ ಕಾಣಬಹುದು. ಇದೀಗ ಈ ದುಬಾರಿ ಕಾರುಗಳ ಸಂಗ್ರಹಣೆಗೆ ಮತ್ತೊಂದು ಅತ್ಯಂತ ದುಬಾರಿ ಕಾರೊಂದು ಸೇರ್ಪಡೆಯಾಗಿದೆ. ಅದೆಂದರೆ 10 ಕೋಟಿ ರೂ.ಯ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ (Rolls Royce Cullinan Black Badge) ಎಸ್‌ಯುವಿ.

ಹೌದು, ವರದಿಯ ಪ್ರಕಾರ ದೀಪಾವಳಿಗೆ ಮುಂಚಿತವಾಗಿ ಮುಖೇಶ್ ಅಂಬಾನಿ ತನ್ನ ಪತ್ನಿಗೆ 10 ಕೋಟಿ ರೂ. ಬೆಲೆಯ ಎಸ್‌ಯುವಿಯನ್ನು (SUV) ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ವೀಡಿಯೊವನ್ನು CS 12 Vlogs ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ನೀತಾ ಅಂಬಾನಿಯವರಿಗೆ ಉಡುಗೊರೆ ನೀಡಿದ ಈ ಹೊಸ ರೋಲ್ಸ್ ರಾಯ್ಸ್ ಈಗ ಭಾರತದ ಅತ್ಯಂತ ದುಬಾರಿ ಕಾರು ಎನಿಸಿಕೊಂಡಿದೆ. ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಭಾರತದ ಅತ್ಯಂತ ದುಬಾರಿ ಎಸ್‌ಯುವಿಯಾಗಿದೆ. ಈ ಐಷಾರಾಮಿ ಕಾರನ್ನು ದೇಶದಲ್ಲಿ ಕೆಲವೇ ಸೆಲೆಬ್ರಿಟಿಗಳು ಹೊಂದಿದ್ದಾರೆ. ಭಾರತದಲ್ಲಿನ ಜನಪ್ರಿಯ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಎಸ್‌ಯುವಿಯನ್ನು ಹೊಂದಿರುವವರಲ್ಲಿ ಒಬ್ಬರೆಂದರೆ ಬಾಲಿವುಡ್ ಸ್ಟಾರ್ ಶಾರುಖ್ ಖಾನ್. ಮುಖೇಶ್ ಅಂಬಾನಿ ಒಡೆತನದ ಇತರ ರೋಲ್ಸ್ ರಾಯ್ಸ್ ಎಸ್‌ಯುವಿಗೆ ಹೋಲಿಸಿದರೆ ನೀತಾ ಅಂಬಾನಿಯವರ ಹೊಸ ಕಾರು ಕಿತ್ತಳೆ ಬಣ್ಣದ ವಿಭಿನ್ನ ಶೇಡ್‌ನಲ್ಲಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ